ಜಕಾರ್ತ, ಡಿ.14 (DaijiworldNews/PY): ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪನ ಸಂಭವಿಸಿದೆ.
"ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿ. ಮೀ ದೂರದಲ್ಲಿ ಭೂಮಿ ಕಂಪಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕ 7.6ನಷ್ಟು ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟಸ್ ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ ಸಂಭವಿಸಿದೆ" ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಯು ಎಸ್ ಭೂವೈಜ್ಞಾನಿಕ ಸಮೀಕ್ಷೆ, "ಭೂಕಂಪನವು ಮೌಮೆರೆ ಪಟ್ಟಣದ ಉತ್ತರಕ್ಕೆ 112 ಕಿ.ಮೀ ದೂರದಲ್ಲಿ ಸಮುದ್ರದ ಅಡಿಯಲ್ಲಿ 18.5 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ" ಎಂದಿದೆ.
"ಈ ಪಟ್ಟಣದಲ್ಲಿ 85 ಸಾವಿರದಷ್ಟು ಜನರು ವಾಸವಾಗಿದ್ದು, ಪೂರ್ವ ನುಸಾ ಟೆಂಗರಾ ಪರಾಂತ್ಯದ ದೀಪಗಳಲ್ಲೇ ಎರಡನೇ ಅತಿ ದೊಡ್ಡ ದ್ವೀಪವಾಗಿದೆ. ಸದ್ಯಕ್ಕೆ ಯಾವುದೇ ಹಾನಿಯಾದ ಕುರಿತು ಜೀವ ಹೋದ ಬಗ್ಗೆ ವರದಿಯಾಗಿಲ್ಲ" ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ.
ಅಮೇರಿಕಾ ಮೂಲದ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಹೇಳಿಕೆಯ ಪ್ರಕಾರ, "ಇಂಡೋನೇಷ್ಯಾದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ ಅದರ ಕೇಂದ್ರ ಬಿಂದುವಿನಿಂದ ಹಿಡಿದು 1000 ಕಿ. ಮೀ ವ್ಯಾಪ್ತಿಯವರೆಗಿನ ಕರಾವಳಿ ಪ್ರದೇಶಗಳಲ್ಲಿ ಅಪಾಯಕಾರಿ ಸುನಾಮಿ ಏಳುವ ಸಾಧ್ಯತೆ" ಎಂದು ಹೇಳಿದೆ.