ಜಿನೀವಾ, ಡಿ.15 (DaijiworldNews/HR): ಓಮಿಕ್ರಾನ್ ಸೋಂಕು ಬಹುತೇಕ ಎಲ್ಲ ದೇಶಗಳಲ್ಲಿಯೂ ಹಿಂದೆಂದೂ ಕಾಣದ ರೀತಿಯಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನಾಮ್ ಗೆಬ್ರೇಷಿಯಸ್ ಮಾಹಿತಿ ನೀಡಿದ್ದು, 'ಓಮಿಕ್ರಾನ್ ರೂಪಾಂತರ ತಳಿ 77 ರಾಷ್ಟ್ರಗಳಿಗೆ ಹರಡಿದ್ದು, ಬಹುಶಃ ಹಿಂದೆಂದೂ ಯಾವ ರೂಪಾಂತರ ತಳಿಯಲ್ಲೂ ಕಾಣದ ರೀತಿಯಲ್ಲಿ ಹೆಚ್ಚಿನ ರಾಷ್ಟ್ರಗಳಿಗೆ ಪತ್ತೆಹಚ್ಚಲಾಗದ ರೀತಿಯಲ್ಲಿ ಹರಡಿದೆ" ಎಂದಿದ್ದಾರೆ.
ಇನ್ನು ಓಮಿಕ್ರಾನ್ ಹರಡುವುದನ್ನು ನಿಯಂತ್ರಿಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ವೇಗವಾಗಿ ಕಾರ್ಯಪ್ರವೃತರಾಗಲು ರಾಷ್ಟ್ರಗಳಿಗೆ ಡಬ್ಲ್ಯುಎಚ್ಒ ಸೂಚಿಸಿದೆ.
ಸೌಮ್ಯ ಲಕ್ಷಣಗಳನ್ನು ಹೊಂದಿರುವ ಓಮಿಕ್ರಾನ್ ಕಡಿಮೆ ಅಪಾಯಕಾರಿ ಎಂಬ ನಿಲುವಿಗೆ ಬರುವುದರ ವಿರುದ್ಧ ಡಬ್ಲ್ಯುಎಚ್ಒ ತಜ್ಞ ಬ್ರೂಸ್ ಐಲ್ವಾರ್ಡ್ ಎಚ್ಚರಿಸಿದ್ದಾರೆ.