ವಾಷಿಂಗ್ಟನ್, ಡಿ 18 (DaijiworldNews/MS): ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ನೊಂದಿಗೆ(ಐಎಸ್ ಐಎಸ್) ಭಾರತ ಮೂಲದ 66 ಉಗ್ರರು ಇದ್ದಾರೆ ಎಂಬ ಆತಂಕಕಾರಿ ಸಂಗತಿಯನ್ನು ಅಮೆರಿಕ ವಿದೇಶಾಂಗ ಸಚಿವಾಲಯದ ೨೦೨೦ ನೇ ಸಾಲಿನ " ದೇಶಗಳಲ್ಲಿ ಭಯೋತ್ಪಾದಕತೆ " ಎಂಬ ವರದಿಯಲ್ಲಿ ಹೊರಹಾಕಿದೆ. ಜೊತೆಗೆ ಎನ್ಐಎ ಸೇರಿದಂತೆ ಭಾರತದ ಭಯೋತ್ಪಾದನಾ ನಿಗ್ರಹ ಪಡೆಗಳು ದೇಶೀಯ ಮತ್ತು ಪ್ರಾದೇಶಿಕ ಭಯೋತ್ಪಾದಕ ಶಕ್ತಿಗಳನ್ನು ಸಕ್ರಿಯವಾಗಿ ಪತ್ತೆಹಚ್ಚಲು ಮತ್ತು ಅವುಗಳನ್ನು ಮಟ್ಟಹಾಕಲು ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘಿಸಿದೆ.
ಈ ಪೈಕಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈಗಾಗಲೇ ೩೪ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಕೇರಳ ಮತ್ತು ಪಶ್ಚಿಮ ಬಂಗಾಳದಿಂದ 160 ಮಂದಿಯನ್ನು ಬಂಧಿಸಿದೆ. ಇದರಲ್ಲಿ10 ಮಂದಿ ಆಲ್ ಕಾಯಿದಾ ಸೇರಿದವರಾಗಿದ್ದಾರೆ.
ಈ ಹಿಂದೆ ಕೇರಳ ಹಾಗೂ ದೇಶದ ಹಲವು ಭಾಗಗಳಿಂದ ಐಸಿಸ್ಗೆ ಯುವಕರು ಸೇರ್ಪಡೆಯಾಗಿರುವ ಬಗ್ಗೆ . ಸಿರಿಯಾ, ಇರಾಕ್ ಸೇರಿದಂತೆ ಹಲವು ದೇಶಗಳಿಗೆ ಭಾರತದಿಂದ ತೆರಳಿದ್ದರು ಎಂಬ ವರದಿಯೂ ಅಮೆರಿಕಾದ ರಿಪೋರ್ಟ್ ನ್ನು ದೃಢೀಕರಿಸುತ್ತದೆ.
ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕದೊಂದಿಗೆ ಭಾರತ ಕೈಜೋಡಿಸಿದೆ. ಉಭಯ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರವಾದ ನಿಗ್ರಹ ಕುರಿತ ‘ನಿರ್ಣಯ-2309’ರ ಅನುಷ್ಠಾನಕ್ಕೆ ಶ್ರಮಿಸುತ್ತಿವೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇದೇ ರೀತಿ ಮುಂದುವರೆಯುತ್ತದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ವಿಫಲ: ಭಯೋತ್ಪಾದನೆ ನಿಗ್ರಹ ಮಾಡುವ ವಿಚಾರದಲ್ಲಿ ಪಾಕಿಸ್ತಾನ ತಾನೇ ಹೇಳಿದ ಮಾತುಗಳಿಗೆ ಬದ್ಧವಾಗಿಲ್ಲ. ಜೈಶ್ ಸೇರಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘತನೆಗಳು ಇನ್ನೂ ಭಾರತದ ವಿರುದ್ದ ಕಾರ್ಯಾಚರಣೆ ನಡೆಸುತ್ತಿದೆ ಅವುಗಳನ್ನು ಮಟ್ಟ ಹಾಕುವಲ್ಲಿ ಪಾಕ್ ಸರ್ಕಾರ ಕೈಗೊಂಡ ಕ್ರಮಗಳು ಎನೇನೂ ಸಾಲದು ಎಂದೂ ಅಮೆರಿಕಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.