ಬ್ರಿಸ್ಬೇನ್, ಡಿ.19 (Daijiworld/PY): "ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಡಿ.19ರ ಭಾನುವಾರದಂದು ಲಘು ವಿಮಾನವೊಂದು ಪತನವಾಗಿದ್ದು, ಇಬ್ಬರು ಮಕ್ಕಳು ಸೇರಿ ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
"ಮೂವರು ಪ್ರಯಾಣಿಕರನ್ನು 69 ವರ್ಷ ಪುರುಷ ಪೈಲಟ್ ಜಾಲಿ ರೈಡ್ಗೆ ಕರೆದುಕೊಂಡು ಹೋಗಿದ್ದರು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೇಕ್ ಆಫ್ ಆದ ಬಳಿಕ ಸ್ವಲ್ಪ ಸಮಯದ ಬಳಿಕ ರಾಕ್ವೆಲ್ ಇಂಟರ್ ನ್ಯಾಶನಲ್ ವಿಮಾನವು ಬ್ರಿಸ್ಬೇನ್ ಈಶಾನ್ಯದ ಜೌಗು ಪ್ರದೇಶಕ್ಕೆ ಇಳಿಯಿತು.
ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಮಂಡಳಿಯ ಆಯುಕ್ತ ಆಂಗಸ್ ಮಿಚೆಲ್ ಈ ಬಗ್ಗೆ ಮಾಹಿತಿ ನೀಡಿದ್ದು, 6-8 ವಾರಗಳಲ್ಲಿ ಅಪಘಾತದ ಸಂಭವನೀಯ ಕಾರಣದ ವರದಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.