ಮನಿಲಾ, ಡಿ.20 (DaijiworldNews/PY): ಫಿಲಿಪೈನ್ಸ್ನ ದಕ್ಷಿಣ ಹಾಗೂ ಕೇಂದ್ರ ಭಾಗಗಳಿಗೆ ಅಪ್ಪಳಿಸಿದ ರೈ ಚಂಡಮಾರುತಕ್ಕೆ 208 ಮಂದಿ ಸಾವನ್ನಪ್ಪಿದ್ದಾರೆ.
ಫಿಲಿಪೈನ್ಸ್ಗೆ ಇತ್ತೀಚಿನ ವರ್ಷಗಳಲ್ಲಿ ಅಪ್ಪಳಿಸಿರುವ ಮಾರಣಾಂತಿಕ ಚಂಡಮಾರುತಗಳಲ್ಲಿ ಇದೂ ಒಂದಾಗಿದೆ.
ಚಂಡಮಾರುತದ ಪರಿಣಾಮ ದೇಶದ ದಕ್ಷಣ ಹಾಗೂ ಮಧ್ಯ ಪ್ರದೇಶಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, 239 ಮಂದಿ ಗಾಯಗೊಂಡಿದ್ದು, 52 ಮಂದಿ ಕಣ್ಮರೆಯಾಗಿದ್ಧಾರೆ.
ರೈ ಚಂಡಮಾರುತ 195 ಕಿ.ಮಿ./ಗಂಟೆ ವೇಗದಲ್ಲಿ ಅಪ್ಪಳಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಕರಾವಳಿ ಪ್ರದೇಶದಿಂದ ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತದಿಂದ ರೆಡ್ ಕ್ರಾಸ್ ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಹಾನಿ ಉಂಟಾಗಿದೆ.
"ರೈ ಚಂಡಮಾರುತದ ಪರಿಣಾಮ ಶಾಲೆ, ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳು ಚೂರು ಚೂರಾಗಿದೆ. ಹಲವು ಸ್ಥಳಗಳಲ್ಲಿ ಸಂಪರ್ಕವೂ ಕಡಿತಗೊಂಡಿದೆ. ಭೂಕುಸಿತ ಹಾಗೂ ಪ್ರವಾಹದಿಂದಿ ಇನ್ನೂ ಹೆಚ್ಚಿನ ಪ್ರಾಣಾಪಾಯವಾಗುವ ಭೀತಿ ಇದೆ" ಎಂದು ಫಿಲಿಪೈನ್ಸ್ ರೆಡ್ಕ್ರಾಸ್ ಅಧ್ಯಕ್ಷ ರಿಚರ್ಡ್ ಗಾರ್ಡನ್ ತಿಳಿಸಿದ್ದಾರೆ.