ಚೀನಾ, ಡಿ 22 (DaijiworldNews/MS): ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ ಭ್ರೂಣವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇತಿಹಾಸದಲ್ಲಿ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ದಕ್ಷಿಣ ಚೀನಾದ ಗನ್ಝೌನಲ್ಲಿ ಈ ಭ್ರೂಣವನ್ನು ಪತ್ತೆಹಚ್ಚಲಾಗಿದ್ದು, ಕನಿಷ್ಠ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಹಲ್ಲಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊರೊಸಾರ್ ವರ್ಗಕ್ಕೆ ಸೇರಿರುವ ಡೈನೋಸಾರ್ ಇದಾಗಿದ್ದು ಸಂಶೋಧಕರು ಇದಕ್ಕೆ " ಬೇಬಿ ಯಿಂಗ್ಲಿಯಾಂಗ್ " ಎಂದು ಹೆಸರಿಸಿದ್ದಾರೆ
ದೊರಕಿರುವ ಪಳೆಯುಳಿಕೆಯಲ್ಲಿ ಭ್ರೂಣದ "ಟಕ್ಕಿಂಗ್" ಎಂದು ಕರೆಯಲ್ಪಡುವ ಸುರುಳಿಯಾಕಾರದ ಸ್ಥಿತಿಯಲ್ಲಿರುವುದನ್ನು ತೋರಿಸುತ್ತದೆ, ಕೋಳಿಮರಿಗಳಂತೆ ಮೊಟ್ಟೆಯಿಂದ ಹೊರಬರಲು ತಯಾರಿ ನಡೆಸುತ್ತಿರುವ ಸ್ಥಿತಿಯಲ್ಲಿ ಡೈನೋಸಾರ್ ಭ್ರೂಣ ಪತ್ತೆಯಾಗಿದೆ.
ಬೇಬಿ ಯಿಂಗ್ಲಿಯಾಂಗ್ ತಲೆಯಿಂದ ಬಾಲದವರೆಗೆ 10.6in (27cm) ಉದ್ದವಿದ್ದು 6.7 ಇಂಚು ಉದ್ದದ ಮೊಟ್ಟೆಯೊಳಗೆ ಇದ್ದು ಇದನ್ನು ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಈ ಭ್ರೂಣದಿಂದ ಡೈನೋಸಾರ್ಗಳು ಮತ್ತು ಆಧುನಿಕ ಪಕ್ಷಿಗಳ ನಡುವಿನ ಸಂಬಂಧದ ಬಗ್ಗೆ ಸಂಶೋಧನೆಯ ಹೆಚ್ಚಿನ ತಿಳುವಳಿಕೆಯನ್ನು ಸಂಶೋಧಕರಿಗೆ ನೀಡಲಿವೆ ಎಂದು ಹೇಳಲಾಗಿದೆ.