ಕಚಿನ್, ಡಿ 22 (DaijiworldNews/MS): ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದ ಜೇಡ್ ಗಣಿಯಲ್ಲಿ ಭೂಕುಸಿತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 70 ಮಂದಿ ಬುಧವಾರ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರ ಪತ್ತೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಕಪಕ್ಕದ ಗಣಿಗಳ ಮಣ್ಣು, ತ್ಯಾಜ್ಯ 60 ಮೀಟರ್ನಷ್ಟು ಕುಸಿದಿದೆ. ಐವರು ಮಹಿಳೆಯರು ಮಣ್ಣಿನೊಳಗೆ ಸಿಲುಕಿದ್ದರು. ಒಬ್ಬನ ಶವವನ್ನು ತೆಗೆಯಲಾಗಿದೆ.
ಬುಧವಾರದ ಭೂಕುಸಿತದಲ್ಲಿ ಐವರು ಯುವತಿಯರು ಮಣ್ಣಿನೊಳಗೆ ಸಿಲುಕಿದ್ದು ಮತ್ತು ಮೂರು ಸಣ್ಣ ಅಂಗಡಿಗಳು ಕೂಡ ಸಮಾಧಿಯಾದವು. ಜೇಡ್ ಕೆಲಸಗಾರನ ದೇಹವನ್ನು ಮಧ್ಯಾಹ್ನದ ವೇಳೆಗೆ ಭಾರೀ ಮಣ್ಣಿನಿಂದ ಹೊರತೆಗೆಯಲಾಯಿತು ಗಯುನಾರ್ ರಕ್ಷಣಾ ತಂಡದ ನ್ಯೊ ಚಾ ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಲಾಭದಾಯಕ ಜೇಡ್ ಹರಳುಗಳ ಗಣಿಗಾರಿಕೆ ಉದ್ಯಮದ ಕೇಂದ್ರ ಪಕಂತ್ ಪ್ರದೇಶವಾಗಿದೆ. ಮ್ಯಾನ್ಮಾರ್ ಸೈನ್ಯ ಮತ್ತು ಜನಾಂಗೀಯ ಗೆರಿಲ್ಲಾ ಪಡೆಗಳ ನಡುವೆ ಘರ್ಷಣೆಯು ನಡೆದಿದ್ದ ಪ್ರದೇಶವಾಗಿದೆ.
ರಕ್ಷಣಾ ಮತ್ತು ಅಗ್ನಿಶಾಮಕ ಸೇವೆಯ 150 ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಇದು ಕಚಿನ್ ರಾಜ್ಯದ ದುರ್ಗಮ ಸ್ಥಳವಾಗಿದೆ. ಮ್ಯಾನ್ಮಾರ್ನ ದೊಡ್ಡ ನಗರ ಯಾಂಗಾನ್ನಿಂದ 950 ಕಿ.ಮೀ. ದೂರದಲ್ಲಿದೆ. ಅಪರೂಪದ, ದುಬಾರಿ ಮೌಲ್ಯದ ಕಲ್ಲುಗಳ ನಿಕ್ಷೇಪ ಇಲ್ಲಿದೆ.