ಸಿಂಗಾಪುರ, ಡಿ.23 (DaijiworldNews/PY): ಪರವಾನಗಿ ಇಲ್ಲದ ಪಾವತಿ ಸೇವೆಯ ವ್ಯವಹಾರವನ್ನು ಮುಂದುವರಿಸಲು ಸಂಚು ರೂಪಿಸಿದಕ್ಕೆ ಸಂಬಂಧಿಸಿ ತಪ್ಪೊಪ್ಪಿಕೊಂಡ ನಂತರ ಸಿಂಗಾಪುರದಲ್ಲಿ ಭಾರತದ ವಿದ್ಯಾರ್ಥಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ವಿದ್ಯಾರ್ಥಿಯನ್ನು ಜಸ್ಪ್ರೀತ್ ಸಿಂಗ್ (26) ಎಂದು ಗುರುತಿಸಲಾಗಿದೆ.
ಜಸ್ಪ್ರೀತ್ ಸಿಂಗ್ ಎಂಟು ಮಂದಿ ಸಹಚರರನ್ನು ಹೊಂದಿದ್ದ. ಅವರೆಲ್ಲರೂ ಭಾರತೀಯರು ಎಂದು ನ್ಯಾಯಾಲಯ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಜಸ್ಪ್ರೀತ್ ಸಿಂಗ್ ಆತಿಥ್ಯ ಹಾಗೂ ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಡಿಪ್ಲೊಮಾ ಪಡೆಯುವ ಸಲುವಾಗಿ ಸಿಂಗ್ 2019ರ ಸೆಪ್ಟೆಂಬರ್ನಲ್ಲಿ ಸಿಂಗಾಪುರಕ್ಕೆ ತೆರಳಿದ್ದರು.