ಢಾಕಾ, ಡಿ 24 (DaijiworldNews/MS): ದಕ್ಷಿಣ ಬಾಂಗ್ಲಾದೇಶದಲ್ಲಿ ಶುಕ್ರವಾರದಂದು ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿದ್ದ ಬಾರ್ಜ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.
ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ (155 ಮೈಲುಗಳು) ದಕ್ಷಿಣದ ಗ್ರಾಮೀಣ ಪಟ್ಟಣವಾದ ಜಲೋಕತಿ ಬಳಿ ಶುಕ್ರವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಹಡಗು ಸುಮಾರು 500 ಜನರನ್ನು ಹೊತ್ತೊಯ್ಯುತ್ತಿತ್ತು.
“ಮೂರು ಅಂತಸ್ತಿನ ಓಬಿಜನ್ 10 ಹೆಸರಿನ ಬಾರ್ಜ್ ಪ್ರಯಾಣಿಸುತ್ತಿದ್ದಾಗ ನದಿಯ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡಿತು. ನಾವು 32 ಮೃತದೇಹಗಳನ್ನು ಹೊರತೆಗೆದಿದ್ದೇವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೆಚ್ಚಿನ ಪ್ರಯಾಣಿಕರು ಅಗ್ನಿಗೆ ಆಹುತಿಯಾದರೆ ಮತ್ತೊಂದಿಷ್ಟು ಮಂದಿ ನದಿಗೆ ಹಾರಿದ ಪರಿಣಾಮ ಮುಳುಗಿ ಸಾವನ್ನಪ್ಪಿದರು, ”ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಅವಘದಲ್ಲಿ ರಕ್ಷಿಸಲಾದ ಗಾಯಗಳಿಂದ ಬಳಲುತ್ತಿರುವ ಸುಮಾರು 100 ಜನರನ್ನು ಬರಿಸಾಲ್ನಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.