ಅಮೇರಿಕಾ, ಡಿ.24 (DaijiworldNews/PY): ಮೊದಲೇ ಒಮಿಕ್ರಾನ್ ಭೀತಿಯಲ್ಲಿರುವ ಯುರೋಪ್ ಹಾಗೂ ಅಮೇರಿಕಾದಲ್ಲಿ ಇದೀಗ ಡೆಲ್ಮಿಕ್ರಾನ್ ಬಂದಿದೆ ಎನ್ನುವ ವರದಿಗಳು ಮತ್ತಷ್ಟು ಆಘಾತ ಮೂಡಿಸಿವೆ.
"ಪಾಶ್ಚಾತ್ಯ ಜಗತ್ತಿನಲ್ಲಿ ಡೆಲ್ಟಾ ಹಾಗೂ ಇಮಿಕ್ರಾನ್ ಅವಳಿ ಸ್ಪೈಕ್ಗಳು ಸೃಷ್ಟಿಯಾಗಿರುವ ಸಾಧ್ಯತೆಗಳು ಇವೆ" ಎಂದು ಮಹಾರಾಷ್ಟ್ರದ ಕೊರೊನಾ ಟಾಸ್ಕ್ ಫೋರ್ಸ್ನ ಸದಸ್ಯರಲ್ಲಿ ಒಬ್ಬರಾದ ಡಾ ಶಶಾಂಕ್ ಜೋಶಿ ಹೇಳಿದ್ಧಾರೆ.
"ಯುರೋಪ್ ಹಾಗೂ ಅಮೇರಿಕಾದಲ್ಲಿ ಡೆಲ್ಟಾ ಹಾಗೂ ಒಮಿಕ್ರಾನ್ನ ಅವಳಿ ಸ್ಪೈಕ್ಗಳಾದ ಡೆಲ್ಮಿಕ್ರಾನ್ ಪ್ರಕರಣಗಳ ಸುನಾಮಿಯೇ ಆಗಿಬಿಟ್ಟಿದೆ" ಎಂದು ತಿಳಿಸಿದ್ದಾರೆ.
ಡೆಲ್ಮಿಕ್ರಾನ್ ಕೊರೊನಾದ ಹೊಸ ರೂಪಾಂತರಿ ಅಲ್ಲ. ಆದರೆ, ಡೆಲ್ಟಾ ಹಾಗೂ ಒಮಿಕ್ರಾನ್ ಸ್ಟ್ರೇನ್ಗಳು ಅಡ್ಡ-ಕಸಿಯಾಗಿ ಹುಟ್ಟಿಕೊಂಡಿರುವ ಹೊಸ ರೂಪಾಂತರಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರವು ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಈಗ 89 ದೇಶಗಳಲ್ಲಿ ವರದಿಯಾಗಿದೆ.
ಕಳೆದ ತಿಂಗಳಿನಲ್ಲಿ ಅಮೇರಿಕಾದಲ್ಲಿ ದಾಖಲಾದ ಎಲ್ಲಾ ಕೊರೊನಾ ಪ್ರಕರಣಗಳಲ್ಲಿ ಶೇ.1ರಷ್ಟು ಮಾತ್ರವೇ ಇದ್ದ ಡೆಲ್ಟಾ ಇದೀಗ ಶೇ.74ರಷ್ಟು ಆಗಿದೆ.
"ಬ್ರಿಟನ್ ಸಂಸತ್ತಿನ ವಿಜ್ಞಾನ ಹಾಗೂ ತಂತ್ರಜ್ಞಾನ ಸಮಿತಿಯೆದುರು ಹಾಜರಾದ ಮಾಡರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಪೌಲ್ ಬರ್ಟನ್, ಯಾರಿಗಾದರೂ ಒಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ಒಮ್ಮೆಗೆ ತಗುಲಿದ್ದರೆ ಹೊಸ ಸ್ಟ್ರೇನ್ ಉತ್ಪತ್ತಿಯಾಗಬಹುದು" ಎಂದು ಹೇಳಿದ್ದಾರೆ.
"ರೋಗನಿರೋಧಕ ಶಕ್ತಿ ರಾಜಿಯಾಗಿರುವ ಮಂದಿಯಲ್ಲಿ ಎರಡೂ ಬಗೆಯ ವೈರಾಣುಗಳು ಕಾಣುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಕೆಲ ಪತ್ರಿಕೆಗಳು ತಿಳಿಸುತ್ತವೆ" ಎಂದು ಡಾ ಬರ್ಟನ್ ಅವರು ಹೇಳಿದ್ದಾಗಿ ವರದಿ ತಿಳಿಸಿದೆ.
"ಎರಡು ವೈರಾಣುಗಳು ತಮ್ಮಲ್ಲಿರುವ ಸ್ಟ್ರೇನ್ಗಳನ್ನು ಅದಲುಬದಲು ಮಾಡಿಕೊಂಡು ಇನ್ನಷ್ಟು ಅಪಾಯಕಾರಿ ವೈರಾಣು ಸೃಷ್ಟಿಸುವ ಸಾಧ್ಯತೆ ಇದೆ" ಎಂದು ಬರ್ಟನ್ ಸಂಸದರಿಗೆ ತಿಳಿಸಿದ್ಧಾರೆ.
"ಈ ರೀತಿ ಆಗುವ ಸಾಧ್ಯತೆ ತೀರಾ ವಿರಳ. ಆದರೂ, ಒಂದೊಮ್ಮೆ ಹಾಗೇನಾದರೂ ಆಗಿಟ್ಟಲ್ಲಿ ನಿಯಂತ್ರಣ ಮೀರಿದ ಘಟನೆಗಳು ಸಂಭವಿಸಲಿವೆ" ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.