ಅಥೆನ್ಸ್ , ಡಿ 24 (DaijiworldNews/MS): ಶುಕ್ರವಾರ ತಡರಾತ್ರಿ ಏಜಿಯನ್ ಸಮುದ್ರದಲ್ಲಿ ವಲಸಿಗರ ದೋಣಿ ಮುಳುಗಿದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. , ಗ್ರೀಸ್ನಲ್ಲಿ ಕಳೆದ ಮೂರು ದಿನಗಳಿಂದ ವಲಸಿಗ ದೋಣಿಗಳ ಮೂರನೇ ಅಪಘಾತ ಇದಾಗಿದ್ದು, ಒಟ್ಟು ಸಾವಿನ ಸಂಖ್ಯೆ ಕನಿಷ್ಠ 27 ಕ್ಕೆ ತಲುಪಿದೆ.
ಸ್ಮಗ್ಲರ್ಗಳು ಟರ್ಕಿಯಿಂದ ಇಟಲಿಗೆ ಬರ್ಲು ಅಪಾಯಕಾರಿ ಮಾರ್ಗವನ್ನು ಹೆಚ್ಚು ಬಳಸುತ್ತಿದ್ದು ಇದರಿಂದ ಅವಘಡಗಳು ಸಂಭವಿಸುತ್ತಿದೆ. ಇದು ಗ್ರೀಸ್ನ ಹೆಚ್ಚು ಗಸ್ತು ತಿರುಗುವ ಪೂರ್ವ ಏಜಿಯನ್ ದ್ವೀಪಗಳನ್ನು ತಪ್ಪಿಸುತ್ತದೆ, ಇಲ್ಲಿ ಹಲವು ವರ್ಷಗಳಿಂದ ದೇಶದ ವಲಸೆ ಬಿಕ್ಕಟ್ಟು ತೀವ್ರವಾಗಿದೆ.
ಮಧ್ಯ ಏಜಿಯನ್ನಲ್ಲಿರುವ ಪರೋಸ್ ದ್ವೀಪದಿಂದ ಸುಮಾರು 8 ಕಿಲೋಮೀಟರ್ (5 ಮೈಲಿ) ದೂರದಲ್ಲಿ ಶುಕ್ರವಾರ ತಡರಾತ್ರಿ ಹಾಯಿದೋಣಿ ಮುಳುಗಿದ ನಂತರ 62 ಜನರನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಹೇಳಿದ್ದಾರೆ.
ಹಡಗಿನಲ್ಲಿ ಸುಮಾರು 80 ಜನರು ಪ್ರಯಾಣಿಸುತ್ತಿದ್ದು ಎಂದು ಬದುಕುಳಿದವರು ಕರಾವಳಿ ಕಾವಲುಗಾರರಿಗೆ ತಿಳಿಸಿದ್ದಾರೆ.
ಐದು ಕೋಸ್ಟ್ ಗಾರ್ಡ್ ಗಸ್ತು ದೋಣಿಗಳು, ಒಂಬತ್ತು ಖಾಸಗಿ ಹಡಗುಗಳು, ಹೆಲಿಕಾಪ್ಟರ್ ಮತ್ತು ಮಿಲಿಟರಿ ಸಾರಿಗೆ ವಿಮಾನವು ಹೆಚ್ಚಿನ ಬದುಕುಳಿದವರಿಗಾಗಿ ರಾತ್ರಿ ಹುಡುಕಾಟವನ್ನು ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಾರ್ಯಾಚರಣೆಯಲ್ಲಿ ಕರಾವಳಿ ಗಾರ್ಡ್ ಡೈವರ್ಗಳು ಸಹ ಭಾಗವಹಿಸಿದ್ದರು.
ಟರ್ಕಿ ಮೂಲದ ಕಳ್ಳಸಾಗಾಣಿಕೆದಾರರು ವಲಸಿಗರು ಮತ್ತು ನಿರಾಶ್ರಿತರನ್ನು ವಿಹಾರ ನೌಕೆಗಳಲ್ಲಿ ಇಟಲಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ