ಜೋಹಾನ್ಸ್ಬರ್ಗ್, ಡಿ.25 (DaijiworldNews/PY): ಭಾರತೀಯ ಮೂಲದ ನರೇಂದ್ರನ್ ಜೋಡಿ ಕೊಲ್ಲಪೆನ್ ಅವರನ್ನು ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಪೀಠವಾದ ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿದೆ.
ದೀರ್ಘಕಾಲಿಕ ಸಂದರ್ಶನ ಪ್ರಕ್ರಿಯೆಗಳ ನಂತರ ಅಧ್ಯಕ್ಷ ಸಿರಿಲ್ ರಾಮ್ಫೋಸಾ ಅವರು 64 ವರ್ಷದ ಕೊಲ್ಲಪೆನ್ ಹಾಗೂ ದಮ್ಮಕ ಸ್ಟೀವನ್ ಮಥೋಪೋ ಅವರನ್ನು ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ಹೊಸದಾಗಿ ನೇಮಕ ಮಾಡಿದ್ದಾರೆ.
ಈ ವರ್ಷದ ಅಕ್ಟೋಬರ್ನಲ್ಲಿ ಎರಡು ಹುದ್ದೆಗಳಿಗಾಗಿ ರಾಮ್ಫೋಸಾ ಅವರು ಶಿಫಾರಸ್ಸು ಮಾಡಿದ್ದ ಐವರು ಅಭ್ಯರ್ಥಿಗಳ ಪೈಕಿ ಕೊಲ್ಲಪೆನ್ ಹಾಗೂ ಮಥೋಪೋ ಅವರೂ ಇದ್ದಾರೆ.
ಕೊಲ್ಲಪೆನ್ ಹಾಗೂ ಮಥೋಪೋ ಅವರು 2022ರ ಜನವರಿ 1ರಿಂದ ಅಧಿಕಾರ ಸ್ವೀಕರಿಸಲಿದ್ಧಾರೆ.