ಕ್ಯಾಲಿಫೋರ್ನಿಯಾ, ಡಿ 29 (DaijiworldNews/MS): ಓಮಿಕ್ರಾನ್ ಭೀತಿ ನಡುವೆ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್ ಪ್ರಕರಣಗಳು 50 ಲಕ್ಷಕೆ ಏರಿಕೆಯಾಗಿದ್ದು ಈ ಮಟ್ಟದ ಪ್ರಕರಣಗಳನ್ನು ಕರೋನವೈರಸ್ ಸೋಂಕನ್ನು ದಾಖಲಿಸಿದ ಅಮೇರಿಕಾದ ಮೊದಲ ರಾಜ್ಯವಾಗಿದೆ.
ಕ್ಯಾಲಿಫೋರ್ನಿಯಾದ ಸಾರ್ವಜನಿಕ ಆರೋಗ್ಯ ಇಲಾಖೆಯು ವರದಿಯಂತೆ, 40 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ರಾಜ್ಯದಲ್ಲಿ ಸೋಂಕುಗಳ ಉಲ್ಬಣವು ಸಂಪೂರ್ಣವಾಗಿ ಅನಿರೀಕ್ಷಿತವಾಗಿಲ್ಲ. ಮನೆಯೊಳಗೆ ಬಲವಂತವಾಗಿ ಇರುವಂತೆ ಮಾಡಿರುವ ತೀವ್ರ ಚಳಿಗಾಲ , ರಜಾ ಪಾರ್ಟಿಗಳು ಮತ್ತು ಕುಟುಂಬ ಕೂಟಗಳಿಂದ ಸೋಂಕುಗಳ ಉಲ್ಬಣಗೊಂಡಿದೆ ್
2020ರ ಜನವರಿ 25ರಂದು ಕ್ಯಾಲಿಫೋರ್ನಿಯಾದಲ್ಲಿ ಪ್ರಥಮ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿತ್ತು. ಆ ವರ್ಷದ ನವೆಂಬರ್ 11 ರಂದು ಅಂದರೆ 292 ದಿನಗಳ ಬಳಿಕ ಒಂದು ದಶಲಕ್ಷ ಸೋಂಕು ಪ್ರಕರಣಗಳು ಏರಿಕೆಯಾಗಿತ್ತು. 44 ದಿನಗಳ ಬಳಿಕ 2 ದಶಲಕ್ಷಕ್ಕೆ ಕೊರೊನಾ ಸೋಂಕು ಏರಿತು. ಕ್ಯಾಲಿಫೋರ್ನಿಯಾದ ಕೇಸ್ಲೋಡ್ ಕೂಡ ಇತರ ದೊಡ್ಡ ರಾಜ್ಯಗಳಿಗಿಂತ ಅಧಿಕವಾಗಿದೆ.ಕೋವಿಡ್ -19 ಗೆ ಸಂಬಂಧಿಸಿದಂತೆ ಕ್ಯಾಲಿಫೋರ್ನಿಯಾ 75,500 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ.
3ನೇ ಅಲೆಗೆ ಅಮೆರಿಕ ತತ್ತರಿಸಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದ ಕೋವಿಡ್ ನಿಯಂತ್ರಣ ಮತ್ತು ನಿವಾರಣೆ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ.