ಇಸ್ಲಾಮಾಬಾದ್, ಜ.01 (DaijiworldNews/PY): ಪಾಕಿಸ್ತಾನದಲ್ಲಿ ಸದ್ದಿಲದ್ದೇ ತಾಲಿಬಾನ್ ರಾಜ್ ಪ್ರಾರಂಭವಾಗಿದ್ದು, ಸೇನೆ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ನಡೆದ ದಾಳಿಯಲ್ಲಿ ನಾಲ್ಕು ಪಾಕ್ ಸೈನಿಕರು ಸಾವನ್ನಪ್ಪಿದ್ಧಾರೆ ಎಂದು ತಿಳಿದುಬಂದಿದೆ.
ಉತ್ತರ ವಜೀರಿಸ್ತಾನದ ಮೀರ್ ಅಲಿ ಪಟ್ಟಣದಲ್ಲಿ ಶಂಕಿತ ಬಂಡುಕೋರರ ಅಡಗುತಾಣದ ಮೇಲೆ ಪಾಕ್ ಭದ್ರತಾ ಪಡೆಗಳು ದಾಳಿ ನಡೆಸುತ್ತಿದ್ದ ಸಂದರ್ಭ, ತೀವ್ರ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.
ತೇಹ್ರಿಕ್ ಇ ತಾಲಿಬಾನಿ ಪಾಕಿಸ್ತಾನ ಸಂಘಟನೆಯಲ್ಲೂ ಸಹ ಸಾವು-ನೋವು ಸಂಭವಿಸಿದೆ ಎಂದು ಹೇಳಲಾಗಿದೆ.
ಪಾಕ್ ಆಡಳಿತವಿರುವ ಪ್ರದೇಶಗಳಲ್ಲಿ ಟಿಟಿಪಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದಾಗ ಪರಸ್ಪರ ಕದನ ವಿರಾಮ ಉಲ್ಲಂಘನೆಯಾಗಿದ್ದು, ಈ ವೇಳೆ ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗಿದೆ.
ಪಾಕ್ನ ಸಂವಿಧಾನವನ್ನು ಟಿಟಿಪಿ ಭಯೋತ್ಪಾದನೆ ಸಂಘಟನೆ ನಂಬುವುದಿಲ್ಲ ಹಾಗೂ ಗೌರವಿಸುವುದಿಲ್ಲ. ಅಫ್ಗಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಹೇಗೆ ವಶಪಡಿಸಿಕೊಂಡಿತು. ಹಾಗೆಯೇ ಪಾಕಿಸ್ತಾನವನ್ನು ವಶಪಡಿಸಿಕೊಂಡು, ಅಲ್ಲಿ ಖಟ್ಟರ್ ಇಸ್ಲಾಂ ಅನ್ನು ಹೇರುವುದು ಟಿಟಿಪಿಯ ಮುಖ್ಯ ಗುರಿ.