ವಿಶ್ವಸಂಸ್ಥೆ, ಜ 05 (DaijiworldNews\AN): ಜಗತ್ತಿನಾದ್ಯಂತ ಹರಡುತ್ತಿರುವ ಓಮಿಕ್ರಾನ್ ಪ್ರಕರಣಗಳು ಹೆಚ್ಚು ಅಪಾಯಕಾರಿ ಹಾಗೂ ಹೊಸ ರೂಪಾಂತರವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಯುರೋಪ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.
ಈ ಕುರಿತು ವಿಶ್ವಸಂಸ್ಥೆಯ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಮಾಹಿತಿ ನೀಡಿದ್ದು, "ಒಮಿಕ್ರಾನ್ ಸೋಂಕು ಪ್ರಪಂಚದಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಆರಂಭದಲ್ಲಿ ಜನರಲ್ಲಿ ಭಯ ಹುಟ್ಟಿಸಿದ್ದು, ಆದರೆ ಕ್ರಮೇಣ ಇದು ಕಡಿಮೆಯಾಗಿ, ಜನ ಜೀವನವು ಸಾಮಾನ್ಯ ಸ್ಥಿತಿಗೆ ಮರಳುವ ಭರವಸೆಯನ್ನು ಹುಟ್ಟುಹಾಕಿದೆ" ಎಂದಿದ್ದಾರೆ.
ಇನ್ನು "ಸೋಂಕಿನ ಪ್ರಮಾಣವು ಭೀಕರ ಪರಿಣಾಮವನ್ನು ಬೀರಬಹುದು. ಆದರೆ ಬಹುಶಃ ಡೆಲ್ಟಾಕ್ಕಿಂತ ಸ್ವಲ್ಪ ಕಡಿಮೆ ಇರಬಹುದು. ಮುಂದಿನ ರೂಪಾಂತರವು ಏನನ್ನು ಹೊರಹಾಕಬಹುದು ಎಂಬುದು ನಿಗೂಢವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
2021 ರ ಕೊನೆಯ ವಾರದಲ್ಲಿ ಐದು ಮಿಲಿಯನ್ಗಿಂತಲೂ ಹೆಚ್ಚು ಹೊಸ ಪ್ರಕರಣಗಳು ಕಂಡು ಬಂದಿದ್ದು, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ಯುರೋಪ್ನಲ್ಲಿ100 ಮಿಲಿಯನ್ಗಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿವೆ ಎಂದಿದ್ದಾರೆ.
ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್ ರೂಪಾಂತರದೊಂದಿಗೆ "ವೈಯಕ್ತಿಕ ಮಟ್ಟದಲ್ಲಿ ಬಹುಶಃ ಆಸ್ಪತ್ರೆಗೆ ದಾಖಲಾಗುವ ಅಪಾಯ ಕಡಿಮೆಯಾಗಿದೆ" ಎಂದು ಮಾಹಿತಿ ನೀಡಿದ್ದಾರೆ.