ಟೊಕಿಯೊ, ಜ 05 (DaijiworldNews/PY): ಉತ್ತರ ಕೊರಿಯಾದ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸುಮಾರು 500 ಕಿ.ಮೀ ದೂರದವರೆಗೆ ಹಾರಿ ಬಂದಿದೆ ಎಂದು ಜಪಾನ್ನ ರಕ್ಷಣಾ ಸಚಿವ ತಿಳಿಸಿದ್ದಾರೆ.
"ಉತ್ತರ ಕೊರಿಯಾ ಬುಧವಾರ ತನ್ನ ಪೂರ್ವ ಕರಾವಳಿಯಲ್ಲಿ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ" ಎಂದು ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಥಿರವಾದ ಆಂತರಿಕ ಪರಿಸ್ಥಿತಿಯನ್ನು ಸೇನಾಬಲದಿಂದ ಹತ್ತಿಕ್ಕಲು ಹೊಸ ವರ್ಷದಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.
"ಕ್ಷಿಪಣಿಯು ಜಪಾನ್ನ ಆರ್ಥಿಕ ವಲಯದ ಹೊರಗಿನ ಪ್ರದೇಶದಲ್ಲಿ ಬಿದ್ದಿದೆ" ಎಂದು ಜಪಾನ್ನ ರಕ್ಷಣಾ ಸಚಿವ ನೊಬೌ ಕಿಶಿ ಹೇಳಿದ್ದಾರೆ.