ಫಿಲಿಡೆಲ್ಫಿಯಾ ಡಿ 06 (DaijiworldNews/MS): ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಸಾರ್ವಜನಿಕ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡದ ದುರಂತದಲ್ಲಿ ಎಂಟು ಮಕ್ಕಳು ಸೇರಿ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ.
ನಗರದ ಫೇರ್ಮೌಂಟ್ ಪರಿಸರದಲ್ಲಿದ್ದ ಸಾರ್ವಜನಿಕ ವಸತಿ ಪ್ರಾಧಿಕಾರ ಒಡೆತನದ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಳಿಗ್ಗೆ 6:30 ರ ಸುಮಾರಿಗೆ ಬೆಂಕಿ ಅವಘಡ ನಡೆದಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಇದು ಯುನೈಟೆಡ್ ಸ್ಟೇಟ್ಸ್ನ ನಾಲ್ಕನೇ ಅತಿ ದೊಡ್ಡ ವಸತಿ ಪ್ರಾಧಿಕಾರವಾಗಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50 ನಿಮಿಷ ಬೇಕಾಯಿತು. ಆದರೆ ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್ಗಳಿದ್ದರೂ, ಅವು ವಿಫಲಗೊಂಡ ಕಾರಣ ಮಕ್ಕಳು ಸೇರಿದಂತೆ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ . ಈವರೆಗೆ ತಾವು ನೋಡಿದ ಅತ್ಯಂತ ಭಯಾನಕ ಅಗ್ನಿ ಅವಘಡವಾಗಿದೆ .ಕಟ್ಟಡವನ್ನು ಎರಡು ಕುಟುಂಬಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಲಾಗಿದ್ದು, ಸುಮಾರು 26 ಮಂದಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಮೇಯರ್ ಜಿಮ್ ಕೆನ್ನಿ ಹೇಳಿದ್ದಾರೆ.
ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್ಗಳನ್ನು ಅಳವಡಿಸಲಾಗಿದ್ದು, 2020ರಲ್ಲಿ ಕೊನೆಯ ಬಾರಿಗೆ ತಪಾಸಣೆ ನಡೆಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಫಿಲಡೆಲ್ಫಿಯಾ ವಸತಿ ಪ್ರಾಧಿಕಾರದ ಕಾರ್ಯನಿರ್ವಾಹಕ ಉಪಾಧ್ಯಕ್ಷ ದಿನೇಶ್ ಇಂದಾಲಾ, ಮೇ 2021 ರಲ್ಲಿ ಕೊನೆಯದಾಗಿ ಆರು ಸಾಧನಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಡಿಗೆದಾರರು ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಒಳಗೆ ಧೂಮಪಾನ ಮಾಡುವಾಗ ಬ್ಯಾಟರಿಗಳನ್ನು ತೆಗೆದುಹಾಕುತ್ತಾರೆ ಬ್ಯಾಟರಿ-ಚಾಲಿತ ಸ್ಮೋಕ್ ಡಿಟೆಕ್ಟರ್ಗಳನ್ನು ತೆಗೆದು ಹಾಕುತ್ತಾರೆ ಎಂದು ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.