ಅಫ್ಗಾನಿಸ್ತಾನ, ಜ 07 (DaijiworldNews/PY): ಅಫ್ಗಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಮಹಿಳೆಯರು ಪುರುಷರೊಂದಿಗೆ ಕಾಫಿ ಶಾಪ್ಗಳಿಗೆ ಪ್ರವೇಶಿಸುವುದನ್ನು ತಾಲಿಬಾನ್ ನಿರ್ಬಂಧಿಸಿದೆ ಎಂದು ವರದಿ ತಿಳಿಸಿದೆ.
"ಯಾವುದೇ ಸೂಚನೆ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಫಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಕಾಫಿ ಶಾಪ್ಗಳು ರಾತ್ರಿ 9.30ರವರೆಗೆ ತೆರೆದಿರುತ್ತವೆ" ಎಂದು ಅಲ್-ಮೊಹಜರ್ ತಿಳಿಸಿದ್ಧಾರೆ.
"ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿ ಹೆರಾತ್ನಲ್ಲಿರುವ ಕಾಫಿ ಶಾಪ್ಗಳನ್ನು ಮುಚ್ಚುವ ಆದೇಶವು ಕಾಬೂಲ್ನಿಂದ ಹೊರಡಿಸಬಹುದು" ಎಂದು ಹೇಳಿದ್ದಾರೆ.