ಅಲ್ಮಟಿ, ಡಿ 07 (DaijiworldNews/MS): ಎಲ್ ಪಿ ಜಿ ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು ಹಾಗೂ ವಿವಿಧ ಕಾರಣಗಳಿಂದ ಅಭೂತಪೂರ್ವ ದಂಗೆಯಿಂದ ಹೊತ್ತಿ ಉರಿದ ಕಜಕಿಸ್ತಾನ್ ದಲ್ಲಿ ಸಾಂವಿಧಾನಿಕ ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂದು ಕಜಕಿಸ್ತಾನ್ ರಾಷ್ಟ್ರದ ಅಧ್ಯಕ್ಷ ಕಾಸ್ಯಿಮ್ - ಜೋಮಾರ್ಟ್ ಟೋಕ ಯೇವ್ ಅವರು ಹೇಳಿದ್ದಾರೆ.
"ಕಜಕಿಸ್ತಾನ್ ನಡೆದ ಹಿಂಸಾಚಾರದಲ್ಲಿ ವಿದೇಶದಲ್ಲಿ ತರಬೇತಿ ಪಡೆದ ಗ್ಯಾಂಗ್ ನ ಕೈವಾಡವಿದೆ ಎಂದು ಅಧ್ಯಕ್ಷ ಕಾಸ್ಯಿಮ್ ಆರೋಪಿಸಿದ್ದರು. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಶ್ರಮವಹಿಸಿ ಕೆಲಸ ಮಾಡುತ್ತಿವೆ. ದೇಶದ ಎಲ್ಲಾ ಭಾಗಗಳಲ್ಲಿ ಸಂವಿಧಾನಾತ್ಮಕ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ. ಸ್ಥಳೀಯ ಪ್ರಾಧಿಕಾರಗಳು ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ "ಎಂದು ಅಧ್ಯಕ್ಷ ಕಾಸಿಂ ಜೋಮಾರ್ಟ್ ಟೋಕಯೆವ್ ಅವರು ಹೇಳಿರುವುದಾಗಿ ವಕ್ತಾರರು ತಿಳಿಸಿದ್ದಾರೆ.
ಕಜಕಿಸ್ತಾನ್ ನಡೆದ ದಂಗೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ೪೦೦ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಗೆಕೋರರು ಅಲ್ಮಟಿಯ ಮೇಯರ್ ಕಚೇರಿ ಹಾಗೂ ಕಜಕಿಸ್ತಾನದ ವಿಮಾನ ನಿಲ್ದಾಣದ ಮೇಲೂ ದಾಳಿ ಮಾಡಿದ್ದರು. ರಾಷ್ಟ್ರವ್ಯಾಪ್ತಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ರಷ್ಯಾ ಪಡೆಗಳು ಆಗಮಿಸಿವೆ.