ನ್ಯೂಯಾರ್ಕ್, ಜ.09 (DaijiworldNews/PY): ಭಾರತೀಯ ಮೂಲದ ಸಿಖ್ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಪೇಟವನ್ನು ಅಪರಿಚಿತ ವ್ಯಕ್ತಿ ಕಿತ್ತು ಬಿಸಾಡಿದ ಘಟನೆ ಅಮೇರಿಕಾದ ಜೆಎಫ್ಕೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದ ಕಾನ್ಸುಲೇಟ್ ಜನರಲ್ ಸೇರಿದಂತೆ ಹಲವಾರು ಮಂದಿ ಘಟನೆನೆಯನ್ನು ಖಂಡಿಸಿದ್ದಾರೆ.
ಜೆಎಫ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಭಾರತದ ಮೂಲದ ಸಿಖ್ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ ನಡೆಸುತ್ತಿರುವ ಅಪರಿಚಿತ ವ್ಯಕ್ತಿ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ.
ಘಟನೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.
"ಈ ದೃಶ್ಯಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಅಮೇರಿಕಾದ ಅಧಿಕಾರಿಗಳಿಗೆ ಇದನ್ನು ಗಮನಕ್ಕೆ ತಂದಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ" ಎಂದು ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.