ಫಿಲಿಪಿನ್ ಜ, 09 (DaijiworldNews/AN): ಕಲಾವಿದರಿಗೆ ವಿವಿಧ ರೀತಿಯ ಪ್ರತಿಭೆಗಳಿರುತ್ತವೆ. ಆದರೆ ಇಲ್ಲೊಬ್ಬ ಕಲಾವಿದೆ ಸತ್ತ ಜಿರಳೆಗಳ ದೇಹದ ಮೇಲೆ ಕಲಾಕೃತಿಗಳನ್ನು ರಚಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು 30ನೇ ವಯಸ್ಸಿನ ಈಕೆ ಫಿಲಿಪಿನೋ ದೇಶದ ಬ್ರೆಂಡಾ ಡೆಲ್ಗಾಡೊ. ಈಕೆ ವಿನ್ಸೆಂಟ್ ವ್ಯಾನ್ ಗಾಗ್ ರವರ 'ಸ್ಟಾರಿ ನೈಟ್’ ಸೇರಿದಂತೆ ಹಲವು ಕಲಾಕೃತಿಗಳನ್ನು ಚಿತ್ರಿಸಿದ್ದಾಳೆ.
ತನ್ನ ಕಲಾಕೃತಿಯ ಕುರಿತು ಸಂತೋಷ ಹಂಚಿಕೊಂಡಿರುವ ಬ್ರೆಂಡಾ ಡೆಲ್ಗಾಡೊ, "ನಾನು ಕೆಲಸ ಮಾಡುವ ಜಾಗದಲ್ಲಿ ಗುಡಿಸುತ್ತಿದ್ದಾಗ ಸತ್ತ ಜಿರಳೆಗಳನ್ನು ಕಂಡು ಅವುಗಳ ಸುಂದರವಾದ ಪುಟ್ಟ ಮೀಸೆಗಳನ್ನು ಗಮನಿಸಿ ಅದರಲ್ಲಿ ಏನಾದರೂ ವಿಶೇಷತೆಯನ್ನು ಮಾಡಬೇಕು ಎಂದು ಅಂದುಕೊಂಡಿದ್ದು, ನನ್ನೊಂದಿಗೆ ನನ್ನ ಸಹ ಕಲಾವಿದರು ಕೂಡ ನನಗೆ ಸಹಾಯ ಮಾಡಿದ್ದರಿಂದ ಜಿರಳೆಗಳ ದೇಹದ ಮೇಲೆ ಕಲಾಕೃತಿಗಳನ್ನು ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನು ಇದಕ್ಕಿಂತಲೂ ಮೊದಲು ಮೆಕ್ಸಿಕನ್ ಕಲಾವಿದ ಕ್ರಿಶ್ಚಿಯನ್ ರಾಮೋಸ್ ಜಿರಳೆಗಳ ಮೇಲೆ ಪ್ರತಿಭಟನಾ ವರ್ಣಚಿತ್ರಗಳನ್ನು ಮಾಡುತ್ತಿದ್ದರು.