ಬ್ಯಾಂಕಾಕ್, ಜ.10 (DaijiworldNews/PY): ಮ್ಯಾನ್ಮಾರ್ನ ಉಚ್ಛಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪರವಾನಗಿ ಇಲ್ಲದೇ ವಾಕಿ-ಟಾಕಿ ಬಳಕೆ ಸೇರಿ ಹಲವು ಆರೋಪಗಳ ಸಂಬಂಧ ಅವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವಿಚಾರಣೆಯ ಕುರಿತು ತಿಳಿದಿರುವ ಮೂಲಗಳು ಹೇಳಿವೆ ಎಂದಿದೆ.
ನೊಬೆಲ್ ಪ್ರಶಸ್ತಿ ವಿಜೇತೆ 76 ವರ್ಷದ ಸೂಕಿ ಮೇಲಿನ ಸುಮಾರು 12 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಗರಿಷ್ಠ 100 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೂಕಿ ಅವರ ವಿಚಾರಣೆಯನ್ನು ಮ್ಯನ್ಮಾರ್ನ ರಾಜಧಾನಿ ನಯ್ಪಿಯಡೊದಲ್ಲಿ ನ್ಯಾಯಾಲಯದ ಮುಚ್ಚಿದ ಕೊಠಡಿಯಲ್ಲಿ ನಡೆಲಸಾಗಿದೆ. ಸೂಕಿ ಪರ ವಾದಿಸಲು ಅವರ ಐವರೂ ವಕೀಲರಿಗೆ ಅಲ್ಲಿನ ನ್ಯಾಯಾಲಯ ನಿರ್ಬಂಧ ವಿಧಿಸಿದ್ದು, ಅವರ ಸಂವಹನಗಳು ದೇಶವನ್ನು ಅಸ್ಥಿರಗೊಳಿಸಬಹುದು ಎಂದು ಹೇಳಿದೆ.
ಸೂಕಿ ಪಕ್ಷವು, ಮಿಲಿಟರಿ ಬೆಂಬಲಿತ ಪಕ್ಷವನ್ನು ಸೋಲಿಸಿ ಗೆಲುವು ಪಡೆದ ವರ್ಷದ ಬಳಿಕ ಈ ತೀರ್ಪು ಬಂದಿದೆ.