ಜ 13 (DaijiworldNews/MS): ಸೂರ್ಯ , ಮಂಗಳ, ಭೂಮಿ ಹೀಗೆ ಗ್ರಹಗಳೆಲ್ಲವೂ ನೆನಪಾದಾಗ ಅದರ ಗೋಳಾಕಾರದ ಆಕೃತಿ ನಮ್ಮ ಮನಃಪಟಲದಲ್ಲಿ ಮೂಡುತ್ತದೆ. ಆದರೆ ವಿಜ್ಞಾನಿಗಳ ಹೊಸ ಆವಿಷ್ಕಾರದ ಪರಿಣಾಮ ಇನ್ನು ಮುಂದೆ ಕೆಲವು ಗ್ರಹಗಳು ಆಲೂಗಡ್ಡೆ ಆಕಾರದಲ್ಲೂ ಕಾಣಿಸಬಹುದು.!
ಹೌದು ಖಗೋಳಶಾಸ್ತ್ರಜ್ಞರು ಇದುವರೆಗೆ ನೋಡಿರದ ಅತ್ಯಂತ ಅಸಾಮಾನ್ಯ ಆಕಾರಗವನ್ನು ಹೊಂದಿರುವ ಗ್ರಹವನ್ನು ಕಂಡುಹಿಡಿದಿದ್ದಾರೆ. ಸದ್ಯ ಇದಕ್ಕೆ ಖಗೋಳಶಾಸ್ತ್ರಜ್ಞರು WASP-103b ಎಂಬ ಹೆಸರಿಸಿದ್ದಾರೆ. , ಇದು ಗೋಳಾಕೃತಿಯನ್ನು ಹೊರತುಪಡಿಸಿ ನೋಡಲು ಆಲೂಗಡ್ಡೆಯಂತಿದೆ. ಇನ್ನೊಂದು ವಿಶೇಷ ಎಂದರೆ ಇದು ಗುರುಗ್ರಹಕ್ಕಿಂತಲೂ ಸುಮಾರು ಒಂದೂವರೆ ಪಟ್ಟು ದೊಡ್ಡದಾದಗಿದ್ದು ನಕ್ಷತ್ರದ ಸುತ್ತಲೂ ರೂಪುಗೊಂಡಿದೆ.
WASP-103b ಎಂಬ ಗ್ರಹವು ಭೂಮಿಯಿಂದ 1500 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ F-ಮಾದರಿಯ ನಕ್ಷತ್ರದ ಸುತ್ತಲೂ ರೂಪುಗೊಂಡಿದೆ. ಈ ನಕ್ಷತ್ರವು ಸೂರ್ಯನಿಗಿಂತ ದೊಡ್ಡದಾಗಿದೆ. ಇನ್ನು ಹೊಸ ಗ್ರಹವು ಗುರುಗ್ರಹಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ದೊಡ್ಡದಾಗಿದೆ.
ಖಗೋಳಶಾಸ್ತ್ರಜ್ಞರ ಅಂತರಾಷ್ಟ್ರೀಯ ತಂಡವು ಮಂಗಳವಾರ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ತಮ್ಮಹೊಸ ಸಂಶೋಧನೆಗಳನ್ನು ಪ್ರಕಟಿಸಿದೆ. ಇದರಲ್ಲಿ ಮೊದಲ ಬಾರಿಗೆ ಪ್ರಪಂಚದ ವಿಲಕ್ಷಣ ಆಕಾರದ ಗ್ರಹದ ಬಗ್ಗೆ ವಿವರಿಸುತ್ತದೆ.
ಇದು ಏಕೆ ಮುಖ್ಯವಾಗಿದೆ - ಖಗೋಳಶಾಸ್ತ್ರಜ್ಞರು ಇಲ್ಲಿಯವರೆಗೆ, 4,884 ಗ್ರಹಗಳನ್ನು ಕಂಡುಹಿಡಿದಿದ್ದಾರೆ ಈ ಗ್ರಹಗಳೆಲ್ಲವೂ ವಿಭಿನ್ನವಾದ ಸಂರಚನೆ ಆಕಾರಗಳು, ಗಾತ್ರಗಳು ಹೊಂದಿದೆ. ಅಂತಹ ಅಪಾರ ಪ್ರಮಾಣದ ಮಾಹಿತಿಗಳು ಖಗೋಳಶಾಸ್ತ್ರಜ್ಞರಿಗೆ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವುಗಳು ತಮ್ಮದೇ ಆದಂತಹ ವ್ಯವಸ್ಥೆಗೆ ಹೇಗೆ ಬರುತ್ತವೆ ಎಂದು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಇದಲ್ಲದೆ ನಮ್ಮ ಊಹೆಗಳಿಗೆ ಸವಾಲೊಡ್ಡಲು ಕೂಡಾ ಸಹಾಯ ಮಾಡುತ್ತದೆ.
ಮುಂದೆ ಏನು? - WASP-103b ನ ಮೇಲಿಸಿ ಹೆಚ್ಚಿನ ಅಧ್ಯಯನಗಳು ಖಗೋಳಶಾಸ್ತ್ರಜ್ಞರು ಗ್ರಹದ ಆಂತರಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಗುರುಗ್ರಹಕ್ಕೆ ಹೋಲಿಸಿದರೆ ಇದು ಪ್ರಪಂಚದ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಈ ಅಧ್ಯಯನಗಳು ಗ್ರಹವು ನಕ್ಷತ್ರದಿಂದ ದೂರ ಸರಿಯುತ್ತಿದೆಯೇ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.