ಕೆನಡಾ, ಜ 13 (DaijiworldNews/AN): ಕೊರೊನಾ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ತಂದೆಗೆ ಮಗುವಿನ ಭೇಟಿಗೆ ಕೋರ್ಟ್ ನಿರ್ಬಂಧಿಸಿದ ಘಟನೆ ಕೆನಡಾದಲ್ಲಿ ನಡೆದಿದೆ.
ಕೊರೊನಾ ಸಂದರ್ಭ ಆರೋಗ್ಯ ಕ್ರಮಗಳನ್ನು ಉಲ್ಲಂಘಿಸಿದರೆ ಮಗುವಿನ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಉತ್ತಮವಲ್ಲ ಎಂದು ಕೋರ್ಟ್ ಹೇಳಿದೆ.
ರಜಾದಿನಗಳಲ್ಲಿ ನಿಗದಿಪಡಿಸಿದ್ದ ಭೇಟಿಯ ಸಮಯವನ್ನು ವಿಸ್ತರಿಸುವಂತೆ ತಂದೆ ವಿನಂತಿಸಿದ್ದು, ಅವರು ಲಸಿಕೆ ಹಾಕಿಸಿಕೊಂಡಿಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ. ಈ ಕಾರಣದಿಂದ ಮಗುವಿನ ಭೇಟಿಗೆ ಕೋರ್ಟ್ ನಿರ್ಬಂಧ ವಿಧಿಸಿದ
ಕ್ವಿಬೆಕ್ನಲ್ಲಿ ಶೇ.90ರಷ್ಟು ಹೆಚ್ಚಿನ ವಯಸ್ಕರೂ ಕೊರೊನಾ ಲಸಿಕೆ ಪಡೆದಿದ್ದಾರೆ. ಇತ್ತೀಚಿನ ವಾರಗಳಲ್ಲಿ ಒಮ್ರಿಕಾನ್ ರೂಪಾತರ ವೇಗವಾಗಿ ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಕೊರೊನಾ ತಡೆಯುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು ಕ್ವಿಬೆಕ್ನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.