ಟೆಕ್ಸಾಸ್ , ಜ 16 (DaijiworldNews/MS): 2010ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಅಧಿಕಾರಿಗಳ ಹತ್ಯೆಗೆ ಯತ್ನಿಸಿ ಶಿಕ್ಷೆಗೊಳಗಾಗಿರುವ ಪಾಕಿಸ್ತಾನಿ ನರವಿಜ್ಞಾನಿ ಆಫಿಯಾ ಸಿದ್ದಿಕಿ ಬಿಡುಗಡೆ ಆಗ್ರಹಿಸಿ ಬಂದೂಕುಧಾರಿ ಹಲವರನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ಅಮೆರಿಕದ ಟೆಕ್ಸಾಸ್ ಸಿನಗಾಗ್ನಲ್ಲಿ ನಡೆದಿದೆ.
ಕಾಲಿವಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ಇಸ್ರೇಲಿ ಪ್ರಜೆಗಳ ಪೈಕಿ ಓರ್ವ ಧರ್ಮಗುರು ಸೇರಿದಂತೆ ನಾಲ್ವರನ್ನು ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 160 ವರ್ಷಗಳ ಹಳೆಯ ಕಾಂಗ್ರೆಗೇಶನ್ ಬೆತ್ ಇಸ್ರೇಲ್ ಕಟ್ಟಡದಲ್ಲಿ ಈ ಕೃತ್ಯ ನಡೆದಿದೆ.
ಒತ್ತೆಯಾಳುಗಳಲ್ಲಿ ಒಬ್ಬರನ್ನು ಸಂಜೆ 5:00 ಗಂಟೆಗೆ (2300 GMT) ಯಾವುದೇ ಗಾಯಗಳನ್ನೂ ಮಾಡದೆ ಬಿಡುಗಡೆ ಮಾಡಲಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಶಸ್ತ್ರಾಸ್ತ್ರಧಾರಿಗಳು ಎಷ್ಟು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂಬ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.
ಶನಿವಾರ ಸರಿಸುಮಾರು 10:41 ಬೆಳಗ್ಗೆ, ಡಲ್ಲಾಸ್ನ ಪಶ್ಚಿಮಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಕಾಲಿವಿಲ್ಲೆ ಪ್ಲೆಸೆಂಟ್ ರನ್ ರಸ್ತೆಯ 6100 ಬ್ಲಾಕ್ನಲ್ಲಿರುವ ಪೊಲೀಸ್ ಠಾಣೆಗೆ ಕರೆಯೊಂದು ಬಂದಿತ್ತು. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಸುತ್ತಮುತ್ತಲು ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡಿದರು ಎಂದು ವರದಿಯಾಗಿದೆ.
ಒತ್ತೆಯಾಳು ಶಸ್ತ್ರಸಜ್ಜಿತನಾಗಿದ್ದನು ಮತ್ತು ಅಜ್ಞಾತ ಸ್ಥಳಗಳಲ್ಲಿ ಬಾಂಬ್ ಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ . 86 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನರವಿಜ್ಞಾನಿ ಸಿದ್ದಿಕಿ ಟೆಕ್ಸಾಸ್ನ ಫೆಡರಲ್ ಜೈಲಿನಲ್ಲಿದ್ದು ಬಂದೂಕುಧಾರಿ "ಆತನ ಜೊತೆ ಮಾತನಾಡಲು ಬಯಸುತ್ತೇನೆ" ಎಂದು ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತನಿಖಾಧಿಕಾರಿಗಳು ವ್ಯಕ್ತಿಯನ್ನು ಗುರುತಿಸಿಲ್ಲ ಬಂದೂಕುಧಾರಿ ಸಿದ್ದಿಕಿಯ ಸಹೋದರ ಎಂದು ಹೇಳಿಕೊಳ್ಳುತ್ತಿದ್ದಾನೆ ಆದರೆ ಈ ಬಗ್ಗೆ ಇನ್ನು ಖಚಿತವಾಗಿಲ್ಲ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ವೈಟ್ಹೌಸ್ ಮೂಲಗಳು ತಿಳಿಸಿವೆ