ಕಾಬೂಲ್, ಜ 16 (DaijiworldNews/HR): ಫ್ಘಾನಿಸ್ತಾನ ಜಜೈಅರುಬ್ ಜಿಲ್ಲೆಯಲ್ಲಿ ಕಲಾವಿದನೋರ್ವನ ಸಂಗೀತ ಪರಿಕರವನ್ನು ಆತನ ಮುಂದೆಯೇ ತಾಲಿಬಾನಿಗಳು ಸುಟ್ಟು ಹಾಕಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ತಾಲಿಬಾನಿಗಳು ಸಂಗೀತ ಪರಿಕರವನ್ನು ಸುಟ್ಟು ಹಾಕಿದಾಗ ವೇಳೆ ಕಲಾವಿದ ಸಂಗೀತ ಪರಿಕರವನ್ನು ಸುಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡು ಅಳುತಿದ್ದರೂ ಅದನ್ನು ಲೆಕ್ಕಿಸದೆ ಸುಟ್ಟು ಹಾಕಿದ್ದಾರೆ ಈ ವೇಳೆ ಅಲ್ಲಿದ್ದ ತಾಲಿಬಾನಿಗಳು ಇದರ ವಿಡಿಯೋವನ್ನು ಅಲ್ಲಿನ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇನ್ನು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ತಾಲಿಬಾನಿಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ ಅದರಂತೆ ಅಲ್ಲಿನ ವಾಹನಗಳಲ್ಲಿ ಸಂಗೀತ ಹಾಕುವುದು, ಸಭೆ- ಸಮಾರಂಭಗಳಲ್ಲಿ ಸಂಗೀತ ಹಾಕಿ ಮನರಂಜನೆಗಳನ್ನು ನಿಷೇಧಿಸಿದೆ.