ಲಂಡನ್, ಜ 17 (DaijiworldNews/HR): ಅಮೇರಿಕಾದ ಟೆಕ್ಸಾಸ್ನ ಯಹೂದಿಯರ ಗುಡಿಯಲ್ಲಿ ಅನೇಕ ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡು, ಪಾಕಿಸ್ತಾನದ ವಿಜ್ಞಾನಿಯ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್ರಿಂದ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಟಿಷ್ ಪ್ರಜೆ ಮಲಿಕ್ ಫೈಸಲ್ ಅಕ್ರಂ ಬ್ಲ್ಯಾಕ್ ಬರ್ನ್ ನಿಂದ ಟೆಕ್ಸಾಸ್ನಲ್ಲಿ ದುಷ್ಕೃತ್ಯಕ್ಕೆ ಕೈ ಹಾಕಿ 10 ಗಂಟೆಯ ಆತಂಕದ ಕಾಲದ ನಡುವೆ ಕಾಲಿವಿಲ್ಲೆಯಲ್ಲಿ ಪೊಲೀಸರೊಂದಿಗೆ ಸಂಘರ್ಷದಲ್ಲಿ ಹತ್ಯೆಯಾಗಿದ್ದಾನೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸಿರುವ ಅಮೆರಿಕಾದ ಪೊಲೀಸರು, ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸ್ ರೊಂದಿಗೆ ಸಂಪರ್ಕ ಹೊಂದಿದ್ದು ತನಿಖೆ ಮುಂದುವರೆದಿದ್ದು, ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದೆ.