ಬೀಜಿಂಗ್, ಜ. 18 (DaijiworldNews/SM): ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ಚೀನಾ ಸರಕಾರ ಕ್ರಮವೊಂದನ್ನು ಕೈಗೊಂಡಿದ್ದು, ವಿದೇಶಗಳಿಂದ ಬರುವ ಪೋಸ್ಟಲ್ ಗಳ ಮೇಲೆ ನಿಗಾ ಇಡಲಾಗಿದ್ದು, ಸ್ಯಾನಿಟೈಸರ್ ಮಾಡುವಂತೆ ಸೂಚನೆ ನೀಡಲಾಗಿದೆ.
ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದಕ್ಕೆ ಕಾರಣ ವಿದೇಶಿ ಪೋಸ್ಟಲ್ ಹಾಗೂ ಪಾರ್ಸೆಲ್ ಗಳು ಎಂಬುವುದಾಗಿ ಚೀನಾ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪೋಸ್ಟಲ್ ಗಳನ್ನು ಸ್ಯಾನಿಟೈಸರ್ ಮಾಡುವಂತೆ ಕೆಲಸಗಾರರಿಗೆ ಸೂಚಿಸಿದೆ. ಜೊತೆಗೆ ಸದ್ಯ ವಿದೇಶಗಳಿಂದ ಆರ್ಡರ್ ಮಾಡದಂತೆ ಸಾರ್ವಜನಿಕರಲ್ಲಿ ಸರಕಾರ ಮನವಿ ಮಾಡಿಕೊಂಡಿದೆ.
ಒಲಿಂಪಿಕ್ಸ್ ಕ್ರೀಡಾಕೂಟ ಹಿನ್ನೆಲೆಯಲ್ಲಿ ಚೀನಾ ಕೊರೊನಾ ಹತ್ತಿಕ್ಕಲು ಕಠಿಣ ಕ್ರಮಗಳಿಗೆ ಮುಂದಾಗಿದೆ.