ಜರ್ಮನ್, ಜ 23 (DaijiworldNews/KP): ಜರ್ಮನಿಯ ನೌಕಾಪಡೆಯ ಮುಖ್ಯಸ್ಥ ಕೇ-ಅಚಿಮ್ ಸ್ಕೋನ್ಬಾಚ್ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಬಿಕ್ಕಟ್ಟಿನ ಕುರಿತು ಮಾಡಿರುವ ಕಾಮೆಂಟ್ಗಳಿಗೆ ತಲೆದಂಡ ಪಡೆದುಕೊಂಡಿದ್ದು, ಇದೀಗ ನೌಕಾಪಡೆಯ ಮುಖ್ಯಸ್ಥ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇ-ಅಚಿಮ್ ಸ್ಕೋನ್ಬಾಚ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನೋಹರ್ ಪಾರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಸ್ನಲ್ಲಿ ಸ್ಕೋನ್ಬಾಚ್ ಭಾಷಣ ಮಾಡಿ, 2014ರಲ್ಲಿ ವಾಷಿಂಗನ್ ಮತ್ತು ಇತರ ಮಿತ್ರ ರಾಷ್ಟ್ರಗಳು ಉಕ್ರೇನ್ನಿಂದ ಮಾಸ್ಕೋದ ಪರ್ಯಾಯ ದ್ವೀಪದನ್ನು ಸ್ಚಾಧಿನಪಡಿಸಿಕೊಂಡಿರುವು ಸ್ವೀಕಾರಾರ್ಹವಲ್ಲ, ಅದನ್ನು ಅವರಿಗೆ ಹಿಂತಿರುಗಿಸಬೇಕು ಎಂದಿದ್ದು, ಅವರ ಈ ಮಾತು ವಿವಾದಕ್ಕೆ ಕಾರಣವಾಗಿತ್ತು.
ಶನಿವಾರ ಉಕ್ರೇನ್ನ ವಿದೇಶಾಂಗ ಸಚಿವಾಲಯ ಈ ಕಾಮೆಂಟ್ಗಳ ವರ್ಗೀಕರಣದ ಸ್ವೀಕಾರಾರ್ಹತೆಯಿಲ್ಲ ಎಂದು ಹೇಳಲು ಜರ್ಮನ್ ರಾಯಭಾರಿ ಅಂಕಾ ಫೆಲ್ಡುಸೆನ್ ಅವರನ್ನು ಕರೆಸಿಕೊಂಡಿದೆ ಎಂದು ಹೇಳಿದೆ.
ಸ್ಕೋನ್ಬಾಚ್ ತನ್ನ ಟ್ವಿಟರ್ ಖಾತೆಯಲ್ಲಿ ಕ್ಷಮೆಯಾಚಿಸಿ, ಭಾರತದ ಚಿಂತಕರ ಗುಡಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ರಕ್ಷಣಾ ನೀತಿ ಹೇಳಿಕೆಗಳು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ಇನ್ನು ಸ್ಕೋನ್ಬಾಚ್ ಶನಿವಾರ ತಮ್ಮ ಸ್ಥಾನದಿಂದ ಕೆಳಗಿಳಿದ ಕೂಡಲೆ ತನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸುವಂತೆ ರಕ್ಷಣಾ ಸಚಿವ ಕ್ರಿಸ್ಟೀನ್ ಲ್ಯಾಂಬ್ರೆಕ್ಟ್ ಅವರಲ್ಲಿ ಕೇಳಿಕೊಂಡಿದ್ದು, ಈಗಾಗಲೇ ಸಚಿವರು ಅವರ ಮನವಿಯನ್ನು ಸ್ವೀಕರಿಸಿದ್ದಾರೆ ಎಂದರು.
ಭಾರತದಲ್ಲಿ ತನ್ನ ದುಡುಕಿನ ಟೀಕೆಯಿಂದ ನನ್ನ ಕಚೇರಿಯ ಮೇಲೆ ಹೆಚ್ಚು ಒತ್ತಡ ಉಂಟು ಮಾಡಿದೆ. ಜರ್ಮನ್ ನೌಕ ಪಡೆಗಳು ಹಾಗೂ ನಿರ್ದಿಷ್ಟವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಕೆ ಆಗಬಹುದಾದ ಹೆಚ್ಚಿನ ಹಾನಿಯನ್ನು ತಪ್ಪಿಸಲು ತಾನು ರಾಜೀನಾಮೆ ನೀಡುವುದು ಅಗತ್ಯವೆಂದು ಅವರು ತಿಳಿಸಿದ್ದಾರೆ.
ಜರ್ಮನಿನ ಪ್ರಸ್ತುತ ಹೇಳಿಕೆಯು ನಿರಾಶಾದಾಯಕ ಮತ್ತು ಪ್ರಯತ್ನಕ್ಕೆ ವಿರುದ್ಧವಾಗಿದ್ದು, ಅದು ಈಗಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು ಎಂದು ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಲಾ ಟ್ವೀಟ್ ಮಾಡಿದ್ದಾರೆ.