ಕೊಲಂಬೋ, ಜ 26 (DaijiworldNews/KP): ದ್ವೀಪ ರಾಷ್ಟ್ರದ ಪ್ರಾದೇಶಿಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ 56 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸುವಂತೆ ಶ್ರೀಲಂಕಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ
ಸಾಂದರ್ಭಿಕ ಚಿತ್ರ
ಶ್ರೀಲಂಕಾ ನೌಕಾಪಡೆಯಿಂದ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವ ಮೂಲಕ ಶ್ರೀಲಂಕಾ ವಶದಲ್ಲಿ ಯಾವುದೇ ಭಾರತೀಯ ಮೀನುಗಾರರು ಇಲ್ಲ ಎಂದು ಶ್ರೀಲಂಕ ಅಧಿಕಾರಿಗಳು ಮತ್ತು ಭಾರತೀಯ ರಾಜತಾಂತ್ರಿಕ ಮೂಲಗಳು ದೃಢಪಡಿಸಿದೆ.
ಡಿಸೆಂಬರ್ ಮಧ್ಯದಲ್ಲಿ ಮನ್ನಾರ್ ನ ದಕ್ಷಿಣ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು ಎಂದು 56 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದರು ಅವರನ್ನು ಬಿಡುಗಡೆಗೊಳಿಸುವಂತೆ ಉತ್ತರ ಜಾಫ್ನಾ ಪರ್ಯಾಯ ದ್ವೀಪದ ನ್ಯಾಯಾಲಯವು ನಿನ್ನೆ ಆದೇಶ ಮಾಡಿದೆ.
ಭಾರತವು ಈ ತಿಂಗಳು ಶ್ರೀಲಂಕಾಕ್ಕೆ ವಿದೇಶಿ ವಿನಿಮಯ ಬಿಕ್ಕಟ್ಟನ್ನು ನಿಭಾಯಿಸಲು ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿತು. ಈ ಹಿನ್ನಲೆಯಲ್ಲಿ ಮಾನವೀಯ ಆಧಾರದ ಮೇಲೆ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಭಾರತದ ಅಧಿಕಾರಿಗಳು ಶ್ರೀಲಂಕಾವನ್ನು ಒತ್ತಾಯಿಸಿದ್ದರಿಂದ ಮೀನುಗಾರರ ಬಿಡುಗಡೆಗೆ ನ್ಯಾಯಾಲಯವು ಸ್ಪಷ್ಟಮಡಿಸಿದೆ. ತಿಂಗಳ ಆರಂಭದಲ್ಲಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಮತ್ತು ವಿದೇಶಾಂಗ ಸಚಿವ ಜೈಶಂಕರ್ ನಡುವಿನ ಮೀನುಗಾರರ ಸಮಸ್ಯೆಯ ಬಗ್ಗೆ ಚರ್ಚೆ ನಡೆದಿತ್ತು.
56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ನ್ಯಾಯಾಲಯವು ಆದೇಶಿಸಿದೆ ಎಂದು ತಿಳಿದು ಸಂತೋಷವಾಗುತಿದೆ ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.