ಯಕೆ, ಜ 27 (DaijiworldNews/HR): ಮಕ್ಕಳಿಲ್ಲದ ಅನೇಕ ತಂದೆ ತಾಯಿಗಳು ನೋವು ಅನುಭವಿಸುತ್ತಿದ್ದು, ಅಂತವರಿಗೆ ವೀರ್ಯವನ್ನು ದಾನ ಮಾಡುವ ಯುಕೆ ಮೂಲದ ಕ್ಲೈವ್ ಜೋನ್ಸ್(66) ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.
ಜೋನ್ಸ್ ಅವರು ಇದುವರೆಗೆ 129 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಿದ್ದು, ಫೇಸ್ಬುಕ್ ಮೂಲಕ ಸಂಪರ್ಕ ಸಾಧಿಸಿ, ತಮ್ಮದೇ ಆದ ವ್ಯಾನ್ ಒಂದನ್ನು ಇಟ್ಟುಕೊಂಡ ಅವರು ಕಳೆದ 10 ವರ್ಷಗಳಿಂದ ವಿವಿಧ ಪ್ರದೇಶಗಳಿಗೆ ತೆರಳಿ ವೀರ್ಯವನ್ನು ದಾನ ಮಾಡಿದ್ದಾರೆ.
ಇನ್ನು ಕ್ಲೈವ್ ಜೋನ್ಸ್ ಅವರ ವೀರ್ಯವನ್ನು ಜಗತ್ತಿನ ಸಮೃದ್ಧ ವೀರ್ಯ ದಾನಿ ಎಂದೇ ಹೇಳಿಕೊಂಡಿದ್ದಾರೆ.
ಇದೀಗ ಆರೋಗ್ಯ ತಜ್ಞರು ಇವರ ವೀರ್ಯ ದಾನದ ಬಗ್ಗೆ ಎಚ್ಚರಿಕೆ ನೀಡಿದ್ದು, ಕ್ಲೈವ್ ಅವರು ವ್ಯಾನ್ನಲ್ಲಿ ವೀರ್ಯವನ್ನು ಸಂಗ್ರಹಿಸಿ ನೀಡುವುದು ಅಷ್ಟು ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ಕ್ಲೈವ್ ಜೋನ್ಸ್ ಮಾತನಾಡಿ, ಈ ವರೆಗೆ ಒಟ್ಟು 138 ಶಿಶುಗಳ ಜನನಕ್ಕೆ ವೀರ್ಯವನ್ನು ನೀಡಿದ್ದೇನೆ. ಅದರಲ್ಲಿ 128 ಶಿಶುಗಳ ಜನನವಾಗಿದೆ. ಇನ್ನೂ 9 ಮಹಿಳೆಯರು ಗರ್ಭಿಣಿಯಾಗಿದ್ದಾರೆ. ವೀರ್ಯ ದಾನವನ್ನು ಮುಂದುವರೆಸುವ ಆಸೆಯಿದ್ದು 150 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಬೇಕು ಎಂದು ಹೇಳಿದ್ದಾರೆ.