ವಾಷಿಂಗ್ಟನ್, ಜ 28 (DaijiworldNews/HR): ಹಿಮಪಾತಕ್ಕೆ ಸಿಲುಕಿ ಇತ್ತೀಚೆಗೆ ಕೆನಡಾ/ಅಮೇರಿಕಾದ ಗಡಿಭಾಗದಲ್ಲಿ ಸಾವನ್ನಪ್ಪಿದ್ದ ನಾಲ್ವರು ಭಾರತೀಯರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಪಾತಕ್ಕೆ ಸಿಲುಕಿದ ಭಾರತೀಯ ಕುಟುಂಬ ಕಾನೂನು ಬಾಹಿರವಾಗಿ ಮಧ್ಯವರ್ತಿಗಳ ಸಲಹೆಯಂತೆ ಗಡಿಯನ್ನು ದಾಟಿದ್ದು, ರಾತ್ರಿ ವೇಳೆ ಮೈನಸ್ 36 ಡಿಗ್ರಿ ಸೆಲ್ಸಿಯಸ್ ಮೈಕೊರೆಯುವಂತಹ ಚಳಿಗಾಳಿ, ಹಿಮಪಾತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು.
ಜನವರಿ 19ರಂದು ಮ್ಯಾನಿಟೋಬಾ ಸಮೀಪದ ಎಮರ್ಸನ್ ಪ್ರದೇಶದಲ್ಲಿ ಅಮೇರಿಕಾವನ್ನು ಅಕ್ರಮವಾಗಿ ಗಡಿಭಾಗದ ಮೂಲಕ ಒಳಪ್ರವೇಶಿಸುವ ವೇಳೆ ಗುಜರಾತ್ನ ಕಾಲೋಲ್ ನ ದಿಂಗುಚಾ ಗ್ರಾಮದವರಾಗಿರುವ ಜಗದೀಶ್ ಬಲ್ ದೇವ್ ಭಾಯಿ ಪಟೇಲ್ (39), ಪತ್ನಿ ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್ 37ವರ್ಷ), ವಿಹಾಂಗಿ ಜಗದೀಶ್ ಕುಮಾರ್ (11ವರ್ಷ) ಮತ್ತು ಧಾರ್ಮಿಕ್ ಜಗದೀಶ್ ಕುಮಾರ್ (3ವರ್ಷ) ಭಾರೀ ಚಳಿ, ಹಿಮಪಾತ ತಾಳಲಾರದೆ ಸಾವನ್ನಪ್ಪಿದ್ದಾರೆ.