ನವದೆಹಲಿ, ಜ 28 (DaijiworldNews/HR): ಕೊರೊನಾ, ಓಮೈಕ್ರಾನ್ ಬಳಿಕ ಇದೀಗ ಚೀನಾದ ವುಹಾನ್ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಹೊಸ ರೀತಿಯ 'ನಿಯೋಕೋವ್' ವೈರಸ್ ಬಗ್ಗೆ ಎಚ್ಚರಿಸಿದ್ದು, ಸೋಂಕು ಪತ್ತೆಯಾದ ಪ್ರತಿ ಮೂವರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಚೀನಾದ ವುಹಾನ್ನ ವಿಜ್ಞಾನಿಗಳು ಹೇಳುವ ಪ್ರಕಾರ 'ನಿಯೋಕೋವ್ ' ವೈರಸ್ ತುಂಬಾನೇ ಅಪಾಯಕಾರಿಯಾಗಿದ್ದು, ಈ ವೈರಸ್ ಹರಡುವ ವೇಗ ಹಾಗೂ ಸಾವಿನ ಸಂಖ್ಯೆ ಹೆಚ್ಚಿದೆಯಂದು ಹೇಳಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ ನಿಯೋಕೋವ್ ವೈರಸ್ ಹೊಸದಲ್ಲ. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ 2012 ಮತ್ತು 2015ರಲ್ಲಿ ಕಂಡು ಬಂದಿದ್ದು, ಇದು ಕೊರೊನಾವೈರಸ್ಗೆ ಕಾರಣವಾದ SARS-CoV-2ನಂತದ್ದೇ ವೈರಸ್ ಆಗಿದೆ.
ಇನ್ನು ಈ ಹಿಂದೆ ಕಂಡು ಬಂದ ನಿಯೋಕೋವ್ ಬಾವಲಿಗಳ ಗುಂಪು ಇರುವ ಕಡೆ ಕಂಡು ಬಂದಿದ್ದು, ಈ ವೈರಸ್ ಪ್ರಾಣಿಗಳಿಗೆ ಹರಡುತ್ತಿತ್ತು. ಆದರೆ ಈಗ ಪತ್ತೆಯಾಗಿರುವ ನಿಯೋವೈರಸ್ ಮನುಷ್ಯರಿಗೂ ಹರಡಬಹುದು ಎಂದು ಹೇಳಲಾಗುತ್ತಿದೆ.
ನಿಯೋಕೋವ್ ವೈರಸ್ ತಗುಲಿದ ಮೂವರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಾರೆ, ಆದ್ದರಿಂದ ಈ ವೈರಸ್ ತುಂಬಾನೇ ಮಾರಣಾಂತಿಕವಾಗಿದೆ. ಈ ವೈರಸ್ ಇನ್ನೂ ಮನುಷ್ಯರಿಗೆ ಹರಡಿಲ್ಲ. ಆದರೆ ಹರಡುವ ಸಾಧ್ಯತೆ ಇರುವುದರಿಂದ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.