ಟೊರಾಂಟೋ, ಜ.30 (DaijiworldNews/KP): ಅಜ್ಞಾತ ಸೈನಿಕನ ಸಮಾಧಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳು ನಮ್ಮ ದೇಶದ ಪವಿತ್ರ ಸ್ಥಳಗಳಾಗಿವೆ. ಕೆನಡಾಕ್ಕಾಗಿ ಹೋರಾಡಿದ ಮತ್ತು ಮಡಿದವರಿಗೆ ಗೌರವದಿಂದ ಅವರನ್ನು ಗಂಭೀರವಾಗಿ ಪರಿಗಣಿಸಲು ನಾನು ಎಲ್ಲಾ ಕೆನಡಿಯರನ್ನು ಕೋರುತ್ತೇನೆ ಎಂದು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕೊರೊನಾ ಲಸಿಕೆಯನ್ನು ಕಡ್ಡಾಯ ಮಾಡಿದ್ದನ್ನು ವಿರೋಧಿಸಿ ಕೆನಡಾದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಒಂಟಾರಿಯೊದ ಪಾರ್ಲಿಮೆಂಟ್ ಹಿಲ್ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಕೊರೊನಾ ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರು.
ಯುಎಸ್ ಗಡಿಯನ್ನು ದಾಟಿ ಬರುವವರಿಗೆ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರತಿಭಟಿಸಲು ನೂರಾರು ಟ್ರಕ್ಗಳು ಮತ್ತು ಸಾವಿರಾರು ಜನರು ಶನಿವಾರದಂದು ಸೆಂಟ್ರಲ್ ಒಟ್ಟಾವಾದ ಬೀದಿಗಳಲ್ಲಿ “ಫ್ರೀಡಮ್ ಕಾನ್ವಾಯ್” ನ ಭಾಗವಾಗಿ ನಿರ್ಬಂಧಿಸಿದರು. ಇದು ಈಗ ಜಸ್ಟಿನ್ ಟ್ರುಡೊ ಸರ್ಕಾರದ ಕೊರೊನಾ ನಿಯಮಗಳ ವಿರುದ್ಧದ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಟ್ರಕ್ ಡ್ರೈವರ್ಗಳಿಗೆ ವ್ಯಾಕ್ಸಿನೇಷನ್ ಅವಶ್ಯಕತೆ ವಿರುದ್ಧ ಈ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ನೂರಾರು ದೊಡ್ಡ ಟ್ರಕ್ಗಳು, ಅವುಗಳ ಇಂಜಿನ್ಗಳನ್ನು, ಏರ್ ಹಾರ್ನ್ಗಳನ್ನು ಸದ್ದು ಮಾಡುತ್ತ ಅಗಾಧವಾದ ಕೂಗು ಮೊಳಗಿತು, ಇನ್ನು ಸಂಸತ್ನ ಹತ್ತಿರ ಪ್ರತಿಭಟನಾಕಾರರು ತೀವ್ರವಾದ ಚಳಿಯಲ್ಲೇ ಶಾಂತವಾಗಿ ಮೆರವಣಿಗೆ ನಡೆಸಿದರು, ಆದರೆ ಈ ಸಮಯದಲ್ಲಿ ಯುವಕರು ಪ್ರತಿಭಟನೆ ಕೂಗಿದ್ದು, ಗುಂಪಿನಲ್ಲಿದ್ದ ಹಿರಿಯರು ಟ್ರಡೊ ಅವರ ಕಚೇರಿಯ ಕಿಟಕಿಗಳ ಕೆಳಗೆ ಪಾತ್ರೆಗಳನ್ನು ಬಡಿದು ಪ್ರತಿಭಟಿಸಿದರು. ಈ ವೇಳೆ ಎಲ್ಲವನ್ನೂ ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಈ ಕ್ರಮಗಳು ನ್ಯಾಯಸಮ್ಮತವಲ್ಲ ಎಂದು ಪಾರ್ಲಿಮೆಂಟ್ ಕಟ್ಟಡದ ಹೊರಗೆ ಪ್ರತಿಭಟಿಸುತ್ತಿದ್ದ , 31 ವರ್ಷದ ಉದ್ಯಮಿ ಫಿಲಿಪ್ ಕ್ಯಾಸ್ಟೊಂಗ್ವೆ ಹೇಳಿದ್ದಾರೆ ಎಂದು ಒಂದು ಸಂಸ್ಥೆ ತಿಳಿಸಿದೆ.
ಕೆಲವು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದ ಮೇಲೆ ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು ಇದನ್ನು ಕೆನಡಾದ ಉನ್ನತ ಸೈನಿಕ ಜನರಲ್ ವೇಯ್ನ್ ಐರ್ ಮತ್ತು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಖಂಡಿಸಿದ್ದಾರೆ.
ಪ್ರತಿಭಟನಾ ಸ್ಥಳದಿಂದ ಸರಿಸುಮಾರು ನಾಲ್ಕು ಕಿಲೋಮೀಟರ್ಗಳಷ್ಟು ದೂರದಲ್ಲಿರುವ ರೈಡೋ ಕಾಟೇಜ್ನಲ್ಲಿರುವ ನಿವಾಸದಲ್ಲಿ ಪ್ರಧಾನಿ ಟ್ರೂಡೊ ಮತ್ತು ಅವರ ಕುಟುಂಬವು ಇನ್ನು ಮುಂದೆ ಇರುವುದಿಲ್ಲ, ಟ್ರೂಡೊ ಅವರ ಮಕ್ಕಳಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಅವರೆಲ್ಲರನ್ನು ಪ್ರತ್ಯೇಕವಾಗಿ ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.