ರಷ್ಯ, ಫೆ 05 (DaijiworldNews/KP): ಉದ್ಯೋಗದ ಸಂದರ್ಶನಕ್ಕೆಂದು ಬಂದ ಸಮಯದಲ್ಲಿ ಕಾರ್ಖಾನೆಯ ಯಂತ್ರದಲ್ಲಿ ಕೂದಲು ಸಿಲುಕಿಕೊಂಡ ಪರಿಣಾಮ ಗರ್ಭಿಣಿಯೊಬ್ಬಳ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಬೆಲಾರಸ್ ನ ಬೊರಿಸೊವ್ನಲ್ಲಿ ಈ ಘಟನೆ ನಡೆದಿದ್ದು ಮೃತ ಯುವತಿಯನ್ನು ಏಳು ವಾರದ ಗರ್ಭಿಣಿಯಾಗಿದ್ದ ಊಮಿದಾ ನಜರೋವಾ (21) ಎಂದು ಗುರುತಿಸಲಾಗಿದೆ.
ಸ್ವರ್ಮೆಟ್ ವೆಲ್ಡಿಂಗ್ ವೈರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನದ ಕಾರ್ಖಾನೆಯಲ್ಲಿ ಉದ್ಯೋಗ ಸಂದರ್ಶನಕ್ಕೆಂದು ತೆರಳಿದಾಗ ಕಾರ್ಖಾನೆಯ ಯಂತ್ರಕ್ಕೆ ಆಕೆಯ ಕೂದಲು ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಸಿಬ್ಬಂದಿಯೊಬ್ಬರು ಆಕೆಗೆ ಕಾರ್ಖಾನೆಯ ಸೌಲಭ್ಯ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ತೋರಿಸುತ್ತಿದ್ದಾಗ ಉಮಿದಾರ ಕೂದಲು ಕೈಗಾರಿಕಾ ಯಂತ್ರಕ್ಕೆ ಸಿಕ್ಕಿ ಕೂದಲು ಅವಳ ಕುತ್ತಿಗೆಗೆ ಸುತ್ತಿಕೊಂಡು ಅಸ್ವಸ್ತಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರ್ಖಾನೆಯ ಯಂತ್ರಕ್ಕೆ ಕೂದಲು ಸಿಲುಕಿ ಕುತ್ತಿಗೆಗೆ ಉತ್ತಿಕೊಂಡು ನೆತ್ತಿ ಕಿತ್ತು ಬಂದ ಪರಿಣಾಮ 20 ದಿನವಾದರು ಆಕೆಗೆ ಪ್ರಜ್ಞೆ ಮರುಕಳಿಸದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಇನ್ನು ಆಕೆಯ ಗಂಟಲಿಗೆ ಬಲವಾದ ಪೆಟ್ಟು ಬಿದ್ದು, ತಲೆಯಿಂದ ತೀವ್ರ ರಕ್ತಸಾವ್ರ ಆಗಿರುವುದರಿಂದ ಆಕೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಆಕೆಯ ತಾಯಿ ಓಲ್ಗ ಹೇಳಿದ್ದಾರೆ