ಅಮೇರಿಕಾ, ಫೆ 06 (DaijiworldNews/KP): ಅಮೇರಿಕಾದ ಮ್ಯಾನ್ ಹಟನ್ ನಗರದ ಯೂನಿಯನ್ ಸ್ಕೇಯರ್ನಲ್ಲಿ ಅಳವಡಿಸಲಾಗಿದ್ದ ಎಂಟು ಅಡಿ ಎತ್ತರದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಶನಿವಾರ ಮುಂಜಾನೆ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಅಮೇರಿಕಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಎದುರು ಅಕ್ಟೋಬರ್ 2, 1986ರಂದು ಗಾಂಧೀಜಿಯವರ 117 ನೇ ಹುಟ್ಟುಹಬ್ಬದ ಪ್ರಯಕ್ತ ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು.
ಇನ್ನು ನಾಲ್ಕು ವರ್ಷಗಳ ಹಿಂದೆ ಗಾಂಧಿ ವಿರೋದಿ ಹಾಗೂ ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆಯು ನಡುವೆ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿರು ಉದ್ಯಾನವನದಲ್ಲಿ ಗಾಂಧೀಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು, ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಕೆಲವು ಅಪರಿಚಿತ ದುಷ್ಕರ್ಮಿಗಳು ಆ ಪ್ರತಿಮೆಯನ್ನು ಧ್ವಂಸಗೊಳಿಸಿ, ಬುಡದಿಂದ ಕಿತ್ತು ಹಾಕಿದ್ದರು.
ಈ ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ನ್ಯಾಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
ಗಾಂಧೀಜಿಯವರ ವಿರೋಧಿಗಳು ಈ ಹೇಯ ಕೃತ್ಯವನ್ನು ಮಾಡಿದ್ದಾರೆ, ಕೃತ್ಯದ ವಿರುದ್ದ ಸ್ಥಳೀಯ ಅಧಿಕಾರಿಗಳು ಹಾಗೂ ಯುಎಸ್ ಡಿಪಾರ್ಟ್ಮೆಂಟ್ಗಳಿಗೆ ದೂರು ನೀಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಭಾರತೀಯ ರಾಜತಾಂತ್ರಿಕ ಕಚೇರಿ ಒತ್ತಾಯಿಸಿದೆ.