ಕಠ್ಮಂಡು, ಫೆ 08 (DaijiworldNews/KP): ಇದೀಗ ಚೀನಾ ಭಾರತ ಮಾತ್ರವಲ್ಲ ನೇಪಾಳ ಗಡಿಯನ್ನೂ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಚೀನಾ ಕ್ಯಾತೆ ವಿರುದ್ಧ ನೇಪಾಳ ಜಾಗತಿಕ ಸಮುದಾಯದ ಮೊರೆ ಹೋಗಿದೆ.
ಸಾಂದರ್ಭಿಕ ಚಿತ್ರ
ಪಶ್ಚಿಮ ನೇಪಾಳದ ಹುಮ್ಲಾ ಜಿಲ್ಲೆಯನ್ನು ಹಂಚಿಕೊಂಡಿರುವ ಗಡಿಯನ್ನು ಅತಿಕ್ರಮಿಸಿದೆ ಎಂದು ಆರೋಪಿಸಿ ನೇಪಾಳ ಸರ್ಕಾರವು ವರದಿಯೊಂದನ್ನು ಬಿಡುಗಡೆ ಮಾಡಿದೆ.
ಈ ನಿಟ್ಟಿನಲ್ಲಿ ನೇಪಾಳ-ಚೀನಾ ಗಡಿ ವಿವಾದವನ್ನು ಅಧ್ಯಯನ ಮಾಡಲು ಗೃಹ ಸಚಿವಾಲಯದ ಜಂಟಿ ಕಾಯದರ್ಶಿ ಅಡಿಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಯು ಗಡಿ ಪ್ರದೇಶಗಳನ್ನು ಅಧ್ಯಯನ ಮಾಡಿ ನೇಪಾಳ ಮತ್ತು ಚೀನಾ ಗಡಿಯ ನಡುವೆ ವಿಶೇಷವಾಗಿ ಲಿಮಿ ಕಣಿವೆಯಲ್ಲಿ ಕೆಲವು ಗಂಭೀರ ಗಡಿ ಸಮಸ್ಯೆಗಳಿವೆ ಎಂದು ದೃಢಪಡಿಸಿದೆ.
ಇನ್ನು ನೇಪಾಳದ ಹಿಂದೂ ಸಿವಿಕ್ ಸೊಸೈಟಿ ಹಾಗೂ ರಾಷ್ಟ್ರೀಯ ಏಕತಾ ಅಭಿಯಾನದ ಅಧ್ಯಕ್ಷ ಬಿನಯ್ ಯಾದವ್ ಅವರು ಸೋಮವಾರ ಕಠ್ಮಂಡುವಿನಲ್ಲಿ ವಿಶ್ವಸಂಸ್ಥೆಗೆ ಈ ಸಂಬಂಧ ಜ್ಞಾಪನಾ ಪತ್ರವನ್ನು ಹಸ್ತಾಂತರಿಸಿದೆ ಎಂದು ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.
ಅಲ್ಲದೆ ಚೀನಾವು ಹುಮ್ಲಾ ಜಿಲ್ಲೆಯಲ್ಲಿ ತಮ್ಮ ಭೂಮಿಯನ್ನು ಅತಿಕ್ರಮಿಸಿದೆ ಮತ್ತು ಚೀನಾದ ಭೂಕಬಳಿಕೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಗಮನಹರಿಸಬೇಕೆಂದು ಒತ್ತಾಯಿಸಿದೆ.
ಇನ್ನು ನಾಗರಿಕ ಸಮಾಜದ ಸಂಘಟನೆಯು ನೇಪಾಳಿ ಕಾಂಗ್ರೆಸ್ ಸರ್ಕಾರವನ್ನು ತನ್ನ ಉಪಕ್ರಮದ ಅಡಿಯಲ್ಲಿ ರಚಿಸಲಾದ ಸಮಿತಿಯು ಸೂಚಿಸಿದಂತೆ ಕ್ರಮ ಕೈಗೊಳಬೇಕೆಂದು ಒತ್ತಾಯಿಸಿದ್ದಾರೆ.