ನ್ಯೂಯಾರ್ಕ್, ಫೆ 10 (DaijiworldNews/MS): ಭಯೋತ್ಪಾದಕ ಸಂಘಟನೆ ISIS-Khorasan (ISIS-K) ಸನಾವುಲ್ಲಾ ಗಫಾರಿ ಮತ್ತು ಕಳೆದ ವರ್ಷ ಕನಿಷ್ಠ 185 ಜನರನ್ನು ಕೊಂದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಉಗ್ರಗಾಮಿ ದಾಳಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ US $ 10 (೭೪.೭೫ ಕೋಟಿ ರೂ.)ಮಿಲಿಯನ್ ಬಹುಮಾನವನ್ನು ಘೋಷಿಸಿದೆ.
ಯುನೈಟೆಡ್ ಸ್ಟೇಟ್ಸ್ ನ ಡಿಪಾರ್ಟ್ಮೆಂಟ್ ಆಫ್ ರಿವಾರ್ಡ್ಸ್ ಫಾರ್ ಜಸ್ಟಿಸ್ (RFJ) ಸೋಮವಾರ ಈ ಕುರಿತು ಅಧಿಸೂಚನೆಗಳನ್ನು ಹೊರಡಿಸಿದೆ.
ISIS-K ನಾಯಕ ಶಹಾಬ್ ಅಲ್-ಮುಹಾಜಿರ್, ಸನಾವುಲ್ಲಾ ಗಫಾರಿ ಕರೆಯಲ್ಪಡುವ ಭಯೋತ್ಪಾದಕನ ಮಾಹಿತಿ ನೀಡಿದರೆ ಯುಎಸ್ ಡಿ 10 ಮಿಲಿಯನ್ ವರೆಗೆ ಬಹುಮಾನವನ್ನು ನೀಡುತ್ತಿದೆ ಎಂದು ಹೇಳಿದೆ.
ಆಗಸ್ಟ್ 26, 2021ರಂದು ಅಫ್ಘಾನಿಸ್ತಾನದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನು ನೀಡಲಾಗುವುದು. 1994ರಲ್ಲಿ ಅಫ್ಘಾನಿಸ್ತಾನದಲ್ಲಿ ಜನಿಸಿದ ಗಫಾರಿ ಪ್ರಸ್ತುತ ಐಸಿಸ್-ಕೆ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದು, ಅಫ್ಘಾನಿಸ್ತಾನದಾದ್ಯಂತ ಎಲ್ಲಾ ಐಸಿಸ್-ಕೆ ಕಾರ್ಯಾಚರಣೆಗಳನ್ನು ಅನುಮೋದಿಸುವ ಮತ್ತು ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾನೆ ಎಂದು ಆರ್ ಎಫ್ ಜೆ ಹೇಳಿದೆ.