ಅಮೇರಿಕಾ, ಫೆ 13 (DaijiworldNews/KP): ಉಕ್ರೇನ್ ಮೇಲೆ ದಾಳಿ ನಡೆದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಹಲವು ಬಾರಿ ಉಕ್ರೇನ್ ಬಿಕ್ಕಟ್ಟು ಸಲುವಾಗಿ ರಷ್ಯಾ ಜೊತೆಗೆ ಅಮೇರಿಕಾ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.
ರಾಜತಾಂತ್ರಿಕ ಕ್ರಮಗಳ ಮೂಲಕ ಉಕ್ರೇನ್ ಸಮಸ್ಯೆಯನ್ನು ಸರಿಪಡಿಸಲು ನಾವು ಬಯಸುತ್ತೇವೆ, ಆದರೆ ಅದು ಸಾಧ್ಯವಾಗದೇ ಇದ್ದರೆ, ಸೂಕ್ತ ರೀತಿಯಲ್ಲಿ ಉತ್ತರ ಕೊಡಲು ಸಿದ್ಧರಿದ್ದೇವೆ ಎಂದು ಶ್ವೇತಭವನ ಬೈಡೆನ್ ಹೇಳಿದ್ದಾರೆ.
ಸದ್ಯ ರಷ್ಯಾ ಪಡೆಗಳು ಉಕ್ರೇನ್ನಲ್ಲಿ ಬೀಡುಬಿಟ್ಟಿದ್ದು ಯುದ್ಧದ ವಾತಾವರಣ ಕಂಡುಬಂದಿದೆ. ಈ ನಡುವೆ ಅಮೇರಿಕಾ 3,000 ಯೋಧರನ್ನು ಒಳಗೊಂಡ ಮತ್ತೊಂದು ತುಕಡಿಯನ್ನು ಪೋಲಂಡ್ಗೆ ಕಳಿಸುವುದಾಗಿ ಘೋಷಿಸಿದೆ.
ಈಗಾಗಲೇ, ಪೋಲಂಡ್ನಲ್ಲಿ 1,700 ಯೋಧರನ್ನು ನಿಯೋಜಿಸಲಾಗಿದೆ. ಈಗ ಹೆಚ್ಚುವರಿಯಾಗಿ 3,000 ಯೋಧರನ್ನು ಕಳುಹಿಸುತ್ತಿರುವುದಾಗಿ ಅಮೇರಿಕಾ ರಕ್ಷಣಾ ಇಲಾಖೆ ತಿಳಿಸಿದೆ.
ಇನ್ನು ಉಕ್ರೇನ್ನಲ್ಲಿರುವುದು ತೀರ ಅಗತ್ಯ ಎನಿಸಿದರೆ ಮಾತ್ರ ಉಳಿದುಕೊಳ್ಳಬೇಕು. ಇಲ್ಲವಾದರೆ ಕೂಡಲೇ ದೇಶ ಹಿಂದಿರುಗಬೇಕು ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತನ್ನ ಪ್ರಜೆಗಳಿಗೆ ಸೂಚಿಸಿದ್ದಾರೆ.