ಸಿಂಗಾಪುರ, ಫೆ 14 (DaijiworldNews/MS): ತಮ್ಮ ಕೆಲಸವನ್ನು ಸಲೀಸಾಗಲು ಸರ್ಕಾರಿ ಏಜೆನ್ಸಿಯ ಸಹಾಯಕ ಇಂಜಿನಿಯರ್ಗೆ 33,513 ಸಿಂಗಾಪುರ ಡಾಲರ್ ಅನ್ನು ಲಂಚವಾಗಿ ನೀಡಿದ್ದಕ್ಕಾಗಿ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರ ನ್ಯಾಯಾಲಯ ಸೋಮವಾರ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಭಾರತೀಯ ಮೂಲದ ಪ್ರಾಜೆಕ್ಟ್ ಮ್ಯಾನೇಜರ್ 52 ವರ್ಷದ ಗಣಿಸನ್ ಸುಪ್ಪಯ್ಯ ಅವರು ಲೋಕೋಪಯೋಗಿ ಮಂಡಳಿಯ (PUB) ಸಹಾಯಕ ಇಂಜಿನಿಯರ್ ಜಮಾಲುದಿನ್ ಮೊಹಮ್ಮದ್ ಅವರಿಗೆ ಲಂಚ ನೀಡಿರುವುದನ್ನು ತಪ್ಪೊಪ್ಪಿಕೊಂಡಿದ್ದಾರೆ.
ಅಪರಾಧದ ಎಸಗಿದ ಸಂದರ್ಭದಲ್ಲಿ ಗಣಿಸನ್ ಅವರು, ಪೈಪ್ ವರ್ಕ್ಸ್ ಮತ್ತು ಕ್ರಿಷ್ಕೊ ಸಿಂಗಾಪುರ್ ಕನ್ಸ್ಟ್ರಕ್ಷನ್ ಎರಡರ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು. ಜಮಾಲುದಿನ್ ಅವರು ಲೋಕೋಪಯೋಗಿ ಮಂಡಳಿಯ ನೀರು ಸರಬರಾಜು (ನೆಟ್ವರ್ಕ್) ವಿಭಾಗದ ನೆಟ್ವರ್ಕ್ ನವೀಕರಣ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದರು.
ನವೆಂಬರ್ 2017 ರಲ್ಲಿ ಮುಖ್ಯ ಗುತ್ತಿಗೆದಾರರು ಕಂಪನಿಗೆ ಕೆಲಸವನ್ನು ಉಪಗುತ್ತಿಗೆ ನೀಡಿದ ನಂತರ, ಜಮಾಲುದಿನ್ ಅವರು PUB ಕೆಲಸದ ಸ್ಥಳಗಳಲ್ಲಿ ಪೈಪ್ ವರ್ಕ್ಸ್ ನಿರ್ವಹಿಸಿದ ಕೆಲಸಗಳನ್ನು ಮೇಲ್ವಿಚಾರಣೆ ಮಾಡಿ ಗಣಿಸನ್ ಅವರನ್ನು ಸಂಪರ್ಕಿಸಿ, ಪೈಪ್ ವರ್ಕ್ಸ್ ಕೆಲಸ ಸುಗಮಗೊಳಿಸಲು ಮತ್ತು ತ್ವರಿತಗೊಳಿಸಲು ಲಂಚ ಕೇಳಿದ್ದು ಇದನ್ನು "ಮೇಲ್ವಿಚಾರಣಾ ಶುಲ್ಕ" ಎಂದು ಕರೆದಿದ್ದರು.
ಮುಖ್ಯ ಗುತ್ತಿಗೆದಾರರಿಗೆ ಬಿಲ್ ಮಾಡಿದ ಪೈಪ್ ವರ್ಕ್ಸ್ನ ಇನ್ವಾಯ್ಸ್ಗಳ ಮೇಲಿನ ಮೊತ್ತದ ಶೇಕಡಾ 2 ರಿಂದ 5 ರವರೆಗಿನ ಮೊತ್ತದೊಂದಿಗೆ ಜಮಾಲುದ್ದೀನ್ಗೆ ಕಾಮಗಾರಿಯ ಅವಧಿ ಆಧಾರದ ಮೇಲೆ ಪಾವತಿಸಲಾಗುವುದು ಎಂದು ಗಣಿಸನ್ ಕೂಡಾ ಒಪ್ಪಿಕೊಂಡರು. ಇದಕ್ಕಾಗಿ ನಕಲಿ ಇನ್ವಾಯ್ಸ್ಗಳನ್ನು ತಯಾರಿಸಿರುವ ಬಗ್ಗೆ ಗಣಿಸನ್ನ ತಮ್ಮ ಮೇಲಧಿಕಾರಿಗೆ ತಿಳಿಸಿರಲಿಲ್ಲ.
ನವೆಂಬರ್ 2017 ಮತ್ತು ಆಗಸ್ಟ್ 2018 ರ ನಡುವೆ, ಗಣಿಸನ್ ಜಮಾಲುದಿನ್ಗೆ ಅನೇಕ ಸಂದರ್ಭಗಳಲ್ಲಿ ಲಂಚ ನೀಡಿದ್ದರು, ಜಮಾಲುದ್ದೀನ್ ತನ್ನ ಮಗನ ಹೆಸರಿನಲ್ಲಿ ಡೇಯುಲ್ ಸರ್ವಿಸಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ನವೆಂಬರ್ನಲ್ಲಿ ಜಮಾಲುದಿನ್ಗೆ ಒಂಬತ್ತು ತಿಂಗಳು ಮತ್ತು 10 ವಾರಗಳ ಜೈಲು ಶಿಕ್ಷೆ ಮತ್ತು 45,169 ಡಾಲರ್ (USD 33,513) ದಂಡ ವಿಧಿಸಿತ್ತು.
ಗಣಿಸನ್ ಅವರು ಲಂಚ ನೀಡಿರುವುದನ್ನು ಮಾತ್ರವಲ್ಲದೆ ನಕಲಿ ಇನ್ವಾಯ್ಸ್ ಮಾಡುವಲ್ಲಿ ಜಮಾಲುದ್ದೀನ್ ಅವರಿಗೆ ಕುಮ್ಮಕ್ಕು ನೀಡಿದ ಎರಡನೇ ಆರೋಪವನ್ನು ಕೂಡಾ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.