ಮಾಸ್ಕೊ, ಫೆ 14 (DaijiworldNews/KP): ಉಕ್ರೇನ್ನ ಸಮೀಪದಲ್ಲಿರುವ ರಷ್ಯಾದ ಗಡಿ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಗಳನ್ನು ತಾಲೀಮು ಮುಗಿಸಿದ ಬಳಿಕ ತಮ್ಮ ನೆಲೆಗಳಿಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಷ್ಯಾದ ರಕ್ಷಣ ಸಚಿವಾಲಯವು, ಉಕ್ರೇನ್ನ ಸಮೀಪದಲ್ಲಿರುವ ರಷ್ಯಾದ ಮಿಲಿಟರಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಗಳನ್ನು ತಾಲೀಮು ಮುಗಿಸಿದ ಬಳಿಕ ತಮ್ಮ ನೆಲೆಗಳಿಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಹೇಳಿದೆ.
ಇನ್ನು ಉಕ್ರೇನ್ ಗಡಿ ಪ್ರದೇಶದಲ್ಲಿ ರಷ್ಯಾವು 1 ಲಕ್ಷಕ್ಕೂ ಅಧಿಕ ಸೇನಾಪಡೆಯನ್ನು ನಿಯೋಜಿಸಿತ್ತು. ಅಲ್ಲದೆ ಅಮೇರಿಕಾವು ಉಕ್ರೇನ್ಗೆ ಬೆಂಬಲ ನೀಡಿರುವುದಕ್ಕೆ ಅಮೇರಿಕಾದ ಕೊಲೆರೊಡೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಾಕ್ಸರ್ ಟೆಕ್ನಾಲಜೀಸ್ ಬೆಲಾರೂಸ್ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ರಷ್ಯಾ ಸೇನಾಪಡೆಗಳನ್ನು ನಿಯೋಜಿಸಿದ್ದು, ಇದರಿಂದ ಯಾವುದೇ ಸಮಯದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂದು ಹೇಳಲಾಗಿತ್ತು.
ಅಲ್ಲದೆ ರಷ್ಯಾದ ಈ ಆಕ್ರಮಣಕಾರಿ ನೀತಿಯ ಬಗ್ಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು, ಈ ನಿಟ್ಟಿನಲ್ಲಿ ಉಕ್ರೇನ್ ಬಳಿ ನಿಯೋಜಿಸಿದ್ದ ಸೇನಾ ಪಡೆಗಳನ್ನು ಹಿಂಪಡೆಯುವುದಾಗಿ ರಷ್ಯಾ ಹೇಳಿದೆ.
ಸದ್ಯ ರಷ್ಯಾದ ಈ ನಿಲುವಿನಿಂದ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿಯನ್ನು ತಗ್ಗಿಸಬಹುದು ಎನ್ನಲಾಗಿದೆ.
ರಷ್ಯಾವು ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾದರೆ ನ್ಯಾಟೊ ಮತ್ತು ಅಮೆರಿಕವು ಸೇನೆಯನ್ನು ಸಜ್ಜುಗೊಳಿಸಿದ್ದರು, ಈ ನಡುವೆ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಅಧಿಕಾರಿಗಳ ಮಟ್ಟದ ಮಾತುಕತೆಯಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ರಷ್ಯಾ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.