ಮಾಸ್ಕೋ, ಫೆ 16(DaijiworldNews/MS): ಉಕ್ರೇನ್ನ ಸ್ವಾಯತ್ತ ಪ್ರದೇಶ ಕ್ರೈಮಿಯಾದ ಸಮೀಪ ನಡೆಸುತ್ತಿದ್ದ ಯುದ್ಧ ತಾಲೀಮನ್ನು ಕೊನೆಗೊಂಡಿದ್ದು ಸೈನಿಕರು ತಮ್ಮ ನೆಲೆಗಳಿಗೆ ವಾಪಸ್ ಆಗುತ್ತಿದ್ದಾರೆ ಎಂದು ರಷ್ಯಾ ಹೇಳಿದೆ.
ಉಕ್ರೇನ್ನ ಗಡಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿ, ಸೇನೆಯ ಒಂದು ತಂಡವನ್ನು ಹಿಂಪಡೆದು ನಿನ್ನೆ ರಷ್ಯಾ ಉದ್ವಿಗ್ನತೆಯನ್ನು ಅಂತ್ಯಗೊಳಿಸುವ ಸೂಚನೆ ನೀಡಿತ್ತು.
ದಕ್ಷಿಣ ಮಿಲಿಟರಿ ಜಿಲ್ಲೆಯ ಘಟಕಗವು ಯುದ್ಧತಂತ್ರ ತಾಲೀಮನ್ನು ಪೂರ್ಣಗೊಳಿಸಿದ್ದು, ಸೈನಿಕರು ತಮ್ಮ ಶಾಶ್ವತ ನೆಲೆಗಳಿಗೆ ಮರಳುತ್ತಿದ್ದಾರೆ’ಎಂದು ರಷ್ಯಾ ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ದೂರದರ್ಶನವು ರಷ್ಯಾದ ನಿಯಂತ್ರಿತ ಪರ್ಯಾಯ ದ್ವೀಪವನ್ನು ಸಂಪರ್ಕಿಸುವ ಸೇತುವೆಯನ್ನು ದಾಟುವ ಮಿಲಿಟರಿ ಘಟಕಗಳ ಚಿತ್ರಗಳನ್ನು ತೋರಿಸಿದೆ