ಬ್ರೆಜಿಲ್, ಫೆ 17 (DaijiworldNews/MS): ಬ್ರೆಜಿಲ್ನ ರಿಯೊ ಡಿ ಜನೈರೊ ರಾಜ್ಯದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಕೆಸರು ಮಿಶ್ರಿತ ಪ್ರವಾಹದಲ್ಲಿ ಕನಿಷ್ಠ 94 ಜನರು ಸಾವನ್ನಪ್ಪಿದ್ದಾರೆ . ಮಂಗಳವಾರ ಮೂರು ಗಂಟೆಗಳ ಧಾರಾಕಾರ ಮಳೆಯ ನಂತರ ಪೆಟ್ರೋಪೊಲಿಸ್ ನಗರದಲ್ಲಿ ದುರಂತ ಸಂಭವಿಸಿದೆ.
ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸತ್ತವರ ಸಂಖ್ಯೆ ಹೆಚ್ಚುತ್ತಲೇ ಇರಬಹುದು ಎಂದು ನಗರದ ಮೇಯರ್ ರೂಬೆನ್ಸ್ ಬೊಂಟೆಂಪೊ ಹೇಳಿದರು.
ರಿಯೋ ಡಿ ಜನೈರೊ ರಾಜ್ಯ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೊ ಪ್ರತಿಕ್ರಿಯಿಸಿ, ಸುಮಾರು 400ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಪರಿಸ್ಥಿತಿ ಬಹುತೇಕ ಯುದ್ಧದಂತೆ ಇದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಹಲವಾರು ಮನೆಗಳು ನಾಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳವಾರದಂದು ಕೇವಲ ಮೂರು ಗಂಟೆಗಳ ಅಂತರದಲ್ಲಿ ಪೆಟ್ರೋಪೊಲಿಸ್ ಪ್ರದೇಶದಲ್ಲಿ ಸುಮಾರು 25.8 ಸೆಂಟಿಮೀಟರ್ಗಳಷ್ಟು (10 ಇಂಚುಗಳಿಗಿಂತ ಹೆಚ್ಚು) ಮಳೆ ಸುರಿದಿದೆ ಎಂದು ತಿಳಿದುಬಂದಿದೆ.