ಬ್ರಿಟನ್ , ಫೆ 18 (DaijiworldNews/MS): ಕರೋನವೈರಸ್ (ಕೋವಿಡ್ -19) ನ ಹೊಸ ರೂಪಾಂತರವು ಜಾಗತಿಕ ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಡೆಲ್ಟಾ ಮತ್ತು ಓಮಿಕ್ರಾನ್ ತಳಿಗಳ ಗುಣಲಕ್ಷಣಗಳನ್ನು ಹೋಲುವ " ಡೆಲ್ಟಾಕ್ರಾನ್ " ಎಂದು ಹೆಸರಿಸಲಾದ ಹೈಬ್ರಿಡ್ ರೂಪಾಂತರವು ಬ್ರಿಟನ್ನಲ್ಲಿ ವರದಿಯಾಗಿದೆ.
ಇದು ‘ಕಳವಳಕಾರಿ ತಳಿ’ ಎಂದು ವಿಶ್ವದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ‘ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ರೂಪಾಂತರಿ ಹೈಬ್ರಿಡ್ ತಳಿ ಡೆಲ್ಟಾಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ.
ಇಲ್ಲಿಯವರೆಗೆ, ಡೆಲ್ಟಾಕ್ರಾನ್ ಯಾವ ರೀತಿಯ ಸಾಂಕ್ರಾಮಿಕವಾಗಿದೆ ಅಥವಾ ಅದರ ರೋಗಲಕ್ಷಣಗಳು ಎಷ್ಟು ತೀವ್ರವಾಗಿರುತ್ತವೆ ಎಂಬುದರ ಕುರಿತು UKHSA ನಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಭಾರತದಲ್ಲಿ ಡೆಲ್ಟಾ ಮಾರಣಾಂತಿಕ ಎರಡನೇ ಅಲೆಗೆ ಕಾರಣವಾಗಿತ್ತು . ಓಮಿಕ್ರಾನ್ ಮೂರನೇ ಅಲೆಗೆ ಕಾರಣವಾಗಿತ್ತು. ಆದರೆ ದಿನನಿತ್ಯದ ಪ್ರಕರಣಗಳ ಸಂಖ್ಯೆಯನ್ನು ನೋಡುವಾಗ, ಡೆಲ್ಟಾಕ್ರಾನ್ ಹಿಂದಿನ ರೂಪಾಂತರಗಳಂತೆ ವಿನಾಶಕಾರಿಯಾಗುವುದಿಲ್ಲ ಎಂದು ಕೆಲವು ತಜ್ಞರು ಹೇಳಿದ್ದಾರೆ.