ಮಾಸ್ಕೋ, ಫೆ 19 (DaijiworldNews/KP): ಉಕ್ರೇನ್ ಬಿಕ್ಕಟ್ಟು ತೀವ್ರತೆ ತಗ್ಗಿಸಲು ಭಾರತ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಭಾರತ, ಭಾರತ ಹಾಲಿ ಸಮಸ್ಯೆ ಪರಿಹರಿಸಲು “ಶಾಂತ ಮತ್ತು ತಣ್ಣನೆಯ ರಾಜತಾಂತ್ರಿಕ ನಡೆ’ಯ ಅಗತ್ಯ ಇದೆ ಹಾಗೂ ದ್ವೇಷದ ವಾತಾವರಣಕ್ಕೆ ಉತ್ತೇಜನ ನೀಡುವುದನ್ನು ಮೊದಲು ತಡೆಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಭಾರತದ ಈ ಹೇಳಿಕೆಗೆ ಮಾಸ್ಕೋದಲ್ಲಿ ಪ್ರತಿಕ್ರಿಯೆ ನೀಡಿರುವ ರಷ್ಯಾ ವಿದೇಶಾಂಗ ಸಚಿವಾಲಯ, ಉಕ್ರೇನ್ ಬಿಕ್ಕಟ್ಟು ತೀವ್ರತೆ ತಗ್ಗಿಸಲು ಭಾರತ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ ಎಂದಿದೆ.
ಮತ್ತೊಂದೆಡೆ, ರಷ್ಯಾ ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ಮತ್ತು ಪ್ರಜೆಗಳನ್ನು ಭರತಕ್ಕೆ ಕರೆ ತರುವ ನಿಟ್ಟಿನಲ್ಲಿ ಏರ್ ಇಂಡಿಯಾ ಫೆ.22, 24 ಮತ್ತು 26ರಂದು ಮೂರು ವಿಶೇಷ ವಿಮಾನಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಕಂಪನಿಯು ಟ್ವಿಟ್ಟರ್ನಲ್ಲಿ ತಿಳಿಸಿದೆ.