ಇಸ್ಲಾಮಾಬಾದ್, ಫೆ 23 (DaijiworldNews/KP): ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಎಲ್ಲ ಮನಸ್ತಾಪಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿವಿ ಚರ್ಚೆ ನಡೆಸಲು ಇಚ್ಚಿಸುತ್ತೇನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಎರಡು ದಿನಗಳ ಮಾಸ್ಕೋ ಭೇಟಿಗೆ ಮುಂಚಿತವಾಗಿ ರಷ್ಯಾದ ’ರಷ್ಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 5 ವರ್ಷಗಳ ಹಿಂದೆ ದೇಶ ಸ್ವಾತಂತ್ರ್ಯ ಪಡೆದಾಗಿನಿಂದಲೂ ಎರಡೂ ದೇಶಗಳ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ನೇರವಾಗಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಇಚ್ಛಿಸುತ್ತೇನೆ. ಆ ಮೂಲಕವಾದರೂ ಉಭಯ ದೇಶಗಳ ನಡುವೆ ಇರುವ ವೈಮನಸ್ಸು ಶಮನಗೊಳ್ಳಲಿ ಎನ್ನುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಇನ್ನು ಇಮ್ರಾನ್ ಖಾನ್ ಅವರ ಈ ಮಾತುಕತೆ ಟ್ವೀಟ್ ಮೂಲಕ ಉತ್ತರಿಸಿದ ಶಶಿ ತರೂರ್, ‘ಯುದ್ಧ-ಯುದ್ಧ’ಕ್ಕಿಂತ ಕಲ್ಪನೆಯು ಉತ್ತಮವಾಗಿದೆ ಎಂಬುದು ನಿಜ, ಆದರೆ ಭಾರತೀಯ ದೂರದರ್ಶನ ಚರ್ಚೆಗಳಲ್ಲಿ ಯಾವುದೇ ಸಮಸ್ಯೆಗಳನ್ನು ಎಂದಿಗೂ ಪರಿಹರಿಸಲ್ಪಡುವುದಿಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಮಾತಿಗೆ ಪ್ರತಿಕ್ರಿಯೆ ನೀಡಿದ ಮನೀಶ್ ತಿವಾರಿ ನಿಜವಾಗಿಯೂ? ಟಿವಿ ಚರ್ಚೆಯು ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ನಿಲುಗಡೆಗೆ ಹೇಗೆ ಕಾರಣವಾಗುತ್ತದೆ? ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಇತ್ತೀಚೆಗಷ್ಟೇ ’ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ನಡೆಯಲು ಸಾಧ್ಯವಿಲ್ಲ’ ಎಂದು ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಸ್ಪಷ್ಟಪಡಿಸಿತ್ತು.