ಮಾಸ್ಕೊ, ಫೆ 24 (DaijiworldNews/HR): ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ.
ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿರುವುದಾಗಿ ವ್ಲಾಡಿಮಿರ್ ಪುಟಿನ್ ಮೂಲಕ ದೂರದರ್ಶನದ ಮೂಲಕ ಘೊಷಣೆ ಮಾಡಿದ್ದಾರೆ.
ಇನ್ನು ಪೂರ್ವ ಉಕ್ರೇನ್ನಲ್ಲಿನ ಬಂಡಾಯ ನಾಯಕರು ಉಕ್ರೇನ್ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ರಷ್ಯಾದ ನೆರವು ಕೇಳಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಹೇಳಿಕೆ ಬೆನ್ನಲ್ಲೇ ಪುಟಿನ್ ಈ ಆದೇಶ ಮಾಡಿದ್ದಾರೆ.