ಉಕ್ರೇನ್, ಫೆ 24 (DaijiworldNews/MS): ರಷ್ಯಾ ಜೊತೆಗಿನ ಬಿಕ್ಕಟ್ಟಿನ ಪರಿಣಾಮವಾಗಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ.
ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ರಷ್ಯಾದ ವಾಯುಯಾನ ಅಧಿಕಾರಿಗಳು ಮಾಡಿದ ಪ್ರಯತ್ನಗಳಿಂದಾಗಿ ಪೂರ್ವ ಉಕ್ರೇನ್ನ ಕೆಲವು ವಾಯುಪ್ರದೇಶಗಳನ್ನು 'ಅಪಾಯಕಾರಿ ಪ್ರದೇಶಗಳು'ಎಂದು ಘೋಷಿಸಲಾಗಿದೆ.
ಪೂರ್ವ ಉಕ್ರೇನ್ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ.
ಬುಧವಾರ ರಾತ್ರಿಯ ಪ್ರಕಟಣೆಯ ಪ್ರಕಾರ, ಉಕ್ರೇನ್ ಅಧಿಕಾರಿಗಳಿಂದ ನಿಯಂತ್ರಿಸಲ್ಪಡುವ ವಾಯು ಸಂಚಾರ ಬಫರ್ ವಲಯಗಳನ್ನು ಸ್ಥಾಪಿಸಲಾಗುತ್ತಿದೆ. ರಷ್ಯಾದ ಅಧಿಕಾರಿಗಳು ವಾಯು ಸಂಚಾರದ ಮೇಲೆ ನಿಯಂತ್ರಣ ಸಾಧಿಸುವ ಅಪಾಯ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೆ ಕಳೆದ ವಾರ, ಪ್ರದೇಶದಲ್ಲಿನ ಪೈಲಟ್ಗಳಿಗೆ ರಷ್ಯಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಮತ್ತು ಉಕ್ರೇನ್ ನ ನಿಯಂತ್ರಕರನ್ನು ಮಾತ್ರ ಗುರುತಿಸುವಂತೆ ಎಚ್ಚರಿಕೆ ನೀಡಲಾಗಿತ್ತು.
ನಿನ್ನೆ ತಡರಾತ್ರಿ ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ಜನತೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿ ಉಕ್ರೇನ್ ನ ಜನತೆ ಮತ್ತು ಸರ್ಕಾರ ಶಾಂತಿಯನ್ನು ಬಯಸುತ್ತಿದೆ, ಆದರೆ ದೇಶಕ್ಕೆ ಧಕ್ಕೆಯುಂಟಾದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ, ನಮಗೆ ಆಗ ಯುದ್ಧ ಅನಿವಾರ್ಯವಾಗುತ್ತದೆ. ತಾವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ, ಮೌನವಾಗಿದ್ದಾರೆ ಎಂದು ಆರೋಪಿಸಿದ್ದರು