ಉಕ್ರೇನ್, ಫೆ 25 (DaijiworldNews/HR): ರಷ್ಯಾ ಸೇನೆಯು ಉಕ್ರೇನ್ನ ರಾಜಧಾನಿ ಕೀವ್ ಪ್ರವೇಶಿಸಿದ್ದು, ಈ ಮೂಲಕ ಉಕ್ರೇನ್ ರಾಜಧಾನಿ ಕೀವ್ ಕೂಡ ರಷ್ಯಾ ವಶವಾಗಿದೆ.
ರಷ್ಯಾದ ಪ್ರಾಯೋಜಿತ ಹ್ಯಾರ್ಗಳು ಈಗ ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ನಂತಹ ಪ್ರದೇಶಗಳಲ್ಲಿ ಇಂಟರ್ನೆಟ್ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿರುವುದರಿಂದ ಉಕ್ರೇನ್ನಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಂಡಿದೆ.
ನೆಟ್ ಬ್ಲಾಕ್ಸ್ ಎಂಬ ಡಿಜಿಟಲ್ ವಕಾಲತ್ತು ಗ್ರೂಪ್ನ ಪ್ರಕಾರ, ರಷ್ಯಾದ ಗಡಿಯಿಂದ ಸುಮಾರು 25 ಮೈಲಿ ದೂರದಲ್ಲಿರುವ ಈಶಾನ್ಯ ಉಕ್ರೇನ್ ನಲ್ಲಿರುವ ಖಾರ್ಕಿವ್ ನಲ್ಲಿ ಇಂಟರ್ನೆಟ್ ಅಡಚಣೆಯಾಗಿದೆ.
ಇನ್ನು ಜಾರ್ಜಿಯಾ ಟೆಕ್ನಲ್ಲಿ ಇಂಟರ್ನೆಟ್ ಸ್ಥಗಿತ ಪತ್ತೆ ಮತ್ತು ವಿಶ್ಲೇಷಣೆ (ಐಒಡಿಎ) ಯೋಜನೆಯ ಪ್ರಕಾರ, ಭಾಗಶಃ ಇಂಟರ್ನೆಟ್ ಅಡಚಣೆ ಫೆಬ್ರವರಿ 23ರ ಮಧ್ಯರಾತ್ರಿಯ ಮೊದಲು ಪ್ರಾರಂಭವಾಗಿದೆ ಎನ್ನಲಾಗಿದೆ.