ಕೀವ್, ಫೆ 25 (DaijiworldNews/MS): ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ರಷ್ಯಾ ಪ್ರಾಯೋಜಿತ ಹ್ಯಾಕರ್ಗಳು ದಾಳಿ ನಡೆಸಿದ್ದು ಇದರ ಪರಿಣಾಮವಾಗಿ ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ನಂತಹ ಪ್ರದೇಶಗಳಲ್ಲಿ ಇಂಟರ್ನೆಟ್ ಕಡಿತಗೊಂಡಿದೆ. ನಾಗರಿಕ ಸಮಾಜದ ಗುಂಪುಗಳ ಪ್ರಕಾರ, ರಾಷ್ಯದಿಂದ ಉಕ್ರೇನ್ನ ಇಂಟರ್ನೆಟ್ ಮೂಲಸೌಕರ್ಯದ ಮೇಲೆ ನೇರ ದಾಳಿಯ ದೊಡ್ಡ ಸಾಧ್ಯತೆಯಿದೆ.
ಪೂರ್ಣ ಪ್ರಮಾಣದ ಯುದ್ಧದ ಮಧ್ಯೆ ಸ್ಥಳೀಯರನ್ನು ಸುಮ್ಮನಾಗಿಸಲು ದೇಶದಲ್ಲಿ ಇಂಟರ್ನೆಟ್ ಮೂಲಸೌಕರ್ಯಕ್ಕೆ ರಷ್ಯಾ ಪ್ರಾಯೋಜಿತ ಹ್ಯಾಕರ್ಗಳು ತಡೆಯೊಡ್ಡಿದ್ದಾರೆ.
ರಷ್ಯಾದದ ಗಡಿಯಿಂದ ಸುಮಾರು 25 ಮೈಲುಗಳಷ್ಟು ದೂರದಲ್ಲಿರುವ ಈಶಾನ್ಯ ಉಕ್ರೇನ್ನಲ್ಲಿರುವ ಖಾರ್ಕಿವ್ನಲ್ಲಿ ಗಮನಾರ್ಹವಾದ ಇಂಟರ್ನೆಟ್ ಅಡಚಣೆಯಾಗಿದೆ. ಫೆಬ್ರವರಿ 23 ರ ಮಧ್ಯರಾತ್ರಿಯ ಮೊದಲು ಭಾಗಶಃ ಇಂಟರ್ನೆಟ್ ಅಡಚಣೆ ಪ್ರಾರಂಭವಾಗಿದ್ದು ಫೆಬ್ರವರಿ 24 ರ ಬೆಳಗಿನವರೆಗೂ ಮುಂದುವರಿದಿದೆ
ದೇಶದಾದ್ಯಂತ ಹಲವಾರು ನಗರಗಳು ಮತ್ತು ಇತರ ಪ್ರದೇಶಗಳನ್ನು ಪೂರೈಸುವ ಟ್ರಯೋಲನ್ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ತಡೆಯುಂಟಾಗಿದ್ದು ಇಂಟರ್ನೆಟ್ ಸ್ಥಗಿತವು ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ.
ಡೊನೆಟ್ಸ್ ಮಾರಿಯುಪೋಲ್ನ ಆಯಕಟ್ಟಿನ ಬಂದರು ನಗರದಲ್ಲಿ ಇಂಟರ್ನೆಟ್ ಅಡಚಣೆ ಉಂಟಾಗಿದೆ. ನಾಗರಿಕರ ಸಾವು ನೋವುಗಳ ವರದಿಗಳ ನಡುವೆಯೇ ಅನೇಕರು ಟೆಲಿಕಾಂ ಸೇವೆಗಳನ್ನು ಕಳೆದುಕೊಂಡಿದ್ದಾರೆ ಎಂದು ಜಾಗತಿಕ ಇಂಟರ್ನೆಟ್ ಮಾನಿಟರ್ ಪ್ಲಾಟ್ಫಾರ್ಮ್ ನೆಟ್ಬ್ಲಾಕ್ಸ್ ಹೇಳಿದೆ.
ದೇಶದ ಇಂಟರ್ನೆಟ್ ಮೂಲಸೌಕರ್ಯದ ಮೇಲೆ ನೇರ ದಾಳಿಯ ಸಾಧ್ಯತೆಯ ಬಗ್ಗೆ ಹಲವಾರು ನಾಗರಿಕ ಸಮಾಜದ ಗುಂಪುಗಳು ಕಳವಳ ವ್ಯಕ್ತಪಡಿಸಿವೆ.